ಶುಂಠಿ ಹಾಳಾಗದಂತೆ ಇಡಲು ಟಿಪ್ಸ್ ಇಲ್ಲಿದೆ ನೋಡಿ

ಸೋಮವಾರ, 19 ನವೆಂಬರ್ 2018 (09:05 IST)
ಬೆಂಗಳೂರು: ಶುಂಠಿ ಹೆಚ್ಚಿಗೆ ತಂದಿದ್ದಾಗಿದೆ. ಹಾಳಾಗದಂತೆ ಸಂರಕ್ಷಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಪೇಪರ್ ಬ್ಯಾಗ್
ಪೇಪರ್ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟು, ಸ್ವಲ್ಪವೂ ಗಾಳಿಯಾಗದಂತೆ ನೋಡಿಕೊಂಡು ಫ್ರಿಡ್ಜ್ ನಲ್ಲಿಡಿ.

ಅಸಿಡಿಕ್ ದ್ರಾವಣ
ಹಸಿ ಶುಂಠಿಯನ್ನು ಲಿಂಬೆ ಅಥವಾ ವಿನೇಗರ್ ದ್ರಾವಣದಲ್ಲಿ ಬೆರೆಸಿ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಫ್ರೆಶ್ ಆಗಿ ಇರುವುದು. ಆದರೆ ಬಳಸುವ ಮುನ್ನ ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.

ಕತ್ತರಿಸಿಕೊಳ‍್ಳಿ
ಶುಂಠಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಫ್ರೀಜರ್ ನಲ್ಲಿಡಿ. ಬಳಿಕ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಫ್ರೆಶ್ ನೆಸ್ ಉಳಿಯುವುದಲ್ಲದೆ, ವಾಸನೆಯೂ ಹೋಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ