ತೂಕ ಕಳೆದುಕೊಳ್ಳಬೇಕೇ? ಇದನ್ನು ಮಾಡಬೇಡಿ!

ಸೋಮವಾರ, 17 ಏಪ್ರಿಲ್ 2017 (05:16 IST)
ಬೆಂಗಳೂರು: ಹೆಚ್ಚಿನವರಿಗೆ ತೂಕ ಕಳೆದುಕೊಳ್ಳುವುದು ಹೇಗೆಂಬ ಚಿಂತೆ. ಅದಕ್ಕೆ ಏನೇನೋ ಮಾಡುವ ಬದಲು, ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೂ ಸಾಕು.

 
ಆದಷ್ಟು ಬಿಸ್ಕತ್ತು, ಚಾಕಲೇಟ್ ಗಳಂತಹ ಆಹಾರ ವಸ್ತುಗಳ ಸೇವನೆ ಕಡಿಮೆ ಮಾಡಿ. ಇದು ಹಸಿವು ಮರೆಸುವುದಲ್ಲದೆ, ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹಣೆಗೆ ಕಾರಣವಾಗುತ್ತದೆ. ಹಾಗಿದ್ದರೂ, ಚಿಪ್ಸ್ ನಂತಹ ಕುರುಕಲು ತಿಂಡಿ ತಿನ್ನದೇ ಮನಸ್ಸು ತಡೆಯುವುದಿಲ್ಲ ಎಂದಾದರೆ, ಅದನ್ನು ಭರ್ಜರಿ ಊಟವಾದ ತಕ್ಷಣ ತಿನ್ನಬೇಡಿ.

ನಮಗೆಲ್ಲಾ ಒಂದು ಅಭ್ಯಾಸವಿದೆ. ಏನೇ ತಿಂಡಿ ಸೇವಿಸುವುದಿದ್ದರೂ, ಅದರ ಜತೆಗೆ ಒಂದು ಖಡಕ್ ಚಹಾ ಇರಲೇಬೇಕು. ಆದಷ್ಟು ಇದನ್ನು ಕಡಿಮೆ ಮಾಡಿ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟು ನಮ್ಮ ದೇಹಕ್ಕೆ ಅಗತ್ಯವೋ ಅಷ್ಟೇ ತಿನ್ನಿ. ಹಾಗೇ ಚಟುವಟಿಕೆಯೂ ಕೊಟ್ಟರೆ, ಅನಗತ್ಯ ಬೊಜ್ಜು ಬೆಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ