ವ್ಯಾಯಾಮ ಮಾಡದೇ ತೂಕ ಇಳಿಸಿಸುವುದು ಹೇಗೆ?

ಶನಿವಾರ, 27 ನವೆಂಬರ್ 2021 (11:23 IST)
ನಿಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ಹಾಗು ಜೀವನ ಶೈಲಿಗಳನ್ನು ಬದಲಾವಣೆ ಮಾಡಿಕೊಂಡಲ್ಲಿ,
ನಿಮ್ಮ ದೇಹದ ತೂಕವನ್ನು ವ್ಯಾಯಾಮವಿಲ್ಲದೆಯೇ ಕಳೆದುಕೊಳ್ಳಬಹುದು. ಈ ಕೆಳಗಿನ ಅದ್ಭುತವಾದ ಟಿಪ್ಸ್ ಗಳನ್ನು ಫಾಲೋ ಮಾಡಿ.
ಜಗಿದು ತಿನ್ನಿ
ನಮ್ಮ ಹಿರಿಯರು ಹೇಳುತ್ತಾರೆ. ಊಟದ ತಟ್ಟೆಯ ಮುಂದೆ ಜಾಸ್ತಿ ಹೊತ್ತು ಕಾಯಬಾರದು ಅಂತ. ಆದರೆ ನಿಧಾನವಾಗಿ ಜಗಿದು ಆಹಾರವನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯೋಜನವಿದೆ. ಮುಖ್ಯವಾಗಿ ನೀವು ತಿನ್ನುವ ಪ್ರಕ್ರಿಯೆಯ ಬಗ್ಗೆ ನಿಮ್ಮ ಮೆದುಳಿಗೆ ಸಮಯ ಬೇಕಾಗುತ್ತದೆ.
ನಿಮ್ಮ ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನುವುದರಿಂದ, ಜೀರ್ಣಕ್ರಿಯೆಯ ಯಾವ ಸಮಸ್ಯೆಯು ಹತ್ತಿರ ಸುಳಿಯುವುದಿಲ್ಲ. ವೇಗವಾಗಿ ತಿನ್ನುವವರು ತೂಕ ಹೆಚ್ಚಿಸಿಕೊಳ್ಳುವುದೇ ಅಲ್ಲದೇ, ಬೊಜ್ಜನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಆರೋಗ್ಯಕರವಾದ ಆಹಾರ
ವ್ಯಾಯಾಮವಿಲ್ಲದೇ ತೂಕ ಇಳಿಸಿಕೊಳ್ಳಬೇಕು ಅಂದುಕೊಳ್ಳುವವರು ತಪ್ಪದೇ ಅನಾರೋಗ್ಯಕರವಾದ ಆಹಾರದಿಂದ ದೂರವಿರಲೇಬೇಕು. ಬದಲಾಗಿ ಬೇಳೆ ಕಾಳು, ತಾಜಾ ತರಕಾರಿ, ಹಣ್ಣುಗಳು ನಿಮ್ಮ ಆಹಾರದಲ್ಲಿರಬೇಕು. ಸಂಸ್ಕರಿಸಿದ ಆಹಾರ, ಬೇಕರಿಯ ಆಹಾರ, ಬೀದಿ ಬದಿಯಲ್ಲಿ ಸಿಗುವ ಫಾಸ್ಟ್ ಫುಡ್ ಗಳಿಂದ ಸಾಧ್ಯವಾದಷ್ಟು ದೂರವಿರಿ. ಇವುಗಳಿಂದ ತ್ವರಿತವಾಗಿ ದೇಹದಲ್ಲಿನ ತೂಕ ಹೆಚ್ಚಾಗಲು ಕಾರಣವಾಗಬಹುದು.
ನೀರು
ಅಧ್ಯಯನಗಳ ಪ್ರಕಾರ, ಊಟ ಮಾಡುವುದಕ್ಕಿಂತ ೩೦ ನಿಮಿಷಗಳ ಮೊದಲು ಹೆಚ್ಚಾಗಿ ನೀರು ಕುಡಿಯುವುದರಿಂದ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಹಾಗೂ ಹೆಚ್ಚಾಗಿ ತಿನ್ನುವುದನ್ನು ತಗ್ಗಿಸುತ್ತದೆ. ಇದರಿಂದ ಅಧಿಕ ಕ್ಯಾಲೋರಿಯಿಂದ ನೀವು ತಪ್ಪಿಸಿಕೊಳ್ಳುತ್ತೀರಿ. ಹೀಗಾಗಿ ಪ್ರತಿದಿನ ನಿಮ್ಮ ಆಹಾರಕ್ಕಿಂತ ಮುಂಚೆ ಯಥೇಚ್ಚವಾಗಿ ನೀರನ್ನು ಕುಡಿಯುವುದನ್ನು ಮರೆಯಬೇಡಿ.
ಅನೇಕ ಮಂದಿ ತಮ್ಮ ಒತ್ತಡದ ಜೀವನದಿಂದ ಸುಲಭವಾಗಿ ಹೊಟ್ಟೆ ತುಂಬಿಸುವ ಬ್ರೆಡ್ ಹಾಗೂ ಜಾಮ್ ತಿಂದು ಕೆಲಸಕ್ಕೆ ಓಡುತ್ತಾರೆ. ಇದರ ಪರಿಣಾಮ ನೀವು ಎಂದಾದರೂ ಊಹಿಸಿದ್ದೀರಾ? ಸಾಮಾನ್ಯವಾಗಿ ಅಂಟು ಪದಾರ್ಥ ವಾಗಿರುವ ಹಿಟ್ಟಿನಿಂದ ತಯಾರಿಸುವ ಈ ಬ್ರೆಡ್ ಗಳು ಬೇಗನೆ ಜೀರ್ಣವಾಗುವುದಿಲ್ಲ ಅಂತ. ಬೇಕರಿ ಅಥವಾ ಪ್ಯಾಕೆಟ್ ನಲ್ಲಿ ಸಂಸ್ಕರಿಸಿದ ಆಹಾರದಿಂದ ದೂರವಿರಿ.
ನಿದ್ರೆ
ಆರೋಗ್ಯದ ವಿಷಯ ಬಂದಾಗ ಜನರು ಸಾಮಾನ್ಯವಾಗಿಯೇ ಒತ್ತಡದಿಂದಾಗಿ ನಿದ್ರೆಯನ್ನು ನಿರ್ಲಕ್ಷಿಸುತ್ತಾರೆ. ವಾಸ್ತವವಾಗಿ, ಇದು ನಿಮ್ಮ ಹಸಿವು ಹಾಗು ತೂಕದ ಮೇಲೆ ಪ್ರಭಾವ ಬೀರುತ್ತದೆ. ನಿದ್ರೆಯ ಕೊರತೆಯು ಹಸಿವನ್ನು ನಿಯಂತ್ರಿಸುವ ಹಾರ್ಮೋನ್ ಲೆಪ್ಪಿನ್ ಮತ್ತು ಗ್ರೆಲಿನ್ ಅನ್ನು ಅಡ್ಡಿಪಡಿಸಬಹುದು. ಒತ್ತಡಕ್ಕೆ ಒಳಗಾದಾಗ ಕಾರ್ಟಿಸೋಲ್ ಎಂಬ ಮತ್ತೊಂದು ಹಾರ್ಮೋನ್ ಹೆಚ್ಚಾಗುತ್ತದೆ.
ಈ ಮೇಲಿನ ಎರಡು ಹಾರ್ಮೋನ್ ಗಳ ಏರಿಳಿತದ ಪರಿಣಾಮ ನಿಮ್ಮ ಹಸಿವು ಮತ್ತು ಅನಾರೋಗ್ಯಕರವಾದ ಆಹಾರದ ಕಡುಬಯಕೆಗಳನ್ನು ಹೆಚ್ಚಿಸುತ್ತದೆ. ಸಹಜವಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ