ಜಿಮ್`ಗೆ ಹೋಗದೇ, ವರ್ಕೌಟ್ ಮಾಡದೇ ತೂಕ ಇಳಿಸುವುದು ಹೇಗೆ.. ಇಲ್ಲಿವೆ ಉಪಯುಕ್ತ ಟಿಪ್ಸ್

ಗುರುವಾರ, 9 ಫೆಬ್ರವರಿ 2017 (16:53 IST)
ಮನುಷ್ಯನ ಅಭ್ಯಾಸಗಳು ಆತನ ಬೆಳವಣಿಗೆಗೆ ಕಾರಣವಾಗುತ್ತವೆ. ಅದೇ ರೀತಿ ಆಹಾರ ಅಭ್ಯಾಸವೂ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಶಿಸ್ತಿಲ್ಲದೆ ಎರ್ರಾಬಿರ್ರಿ ತಿಂದರೆ ದೇಹ ದಪ್ಪಾಗಾಗುತ್ತದೆ. ಹೀಗೆ, ದಢೂತಿ ದೇಹದಿಂದ ಪರಿತಪಿಸುತ್ತಿರುವವರಿಗೆ ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.


1. ಟಿವಿ ಮುಂದೆ ಕುಳಿತು ಊಟ ಮಾಡಬೇಡಿ: ಟಿವಿ ಮುಂದೆ ಕುಳಿತು ಊಟ ಮಾಡುವುದರಿಂದ ಊಟದ ರುಚಿ ಗ್ರಹಿಸಲು ಸಾಧ್ಯವಿಲ್ಲ. ಗಮನ ಬೇರೆಡೆ ಇರುವುದರಿಂದ ಮಿತಿ ಇಲ್ಲದೆ ತಿಂದು ದಪ್ಪಗಾಗ್ತೀರಿ. ಅದನ್ನ ಬಿಟ್ಟು ಪ್ರಶಾಂತವಾಗಿ ಊಟದ ಸವಿ ಸವಿಯುತ್ತಾ ತಿಂದರೆ ಕಡಿಮೆ ಊಟದಲ್ಲೇ ತೃಪ್ತಿಯಾಗುತ್ತೆ.

2. ಕಂಪ್ಯೂಟರ್ ಜೊತೆ ಊಟ ಸೇವಿಸಬೇಡಿ: ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್`ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಕಂಪ್ಯೂಟರ್ ಮುಂದೆ ಕುಳಿತು ತಿನ್ನುವವರು 'distracted eaters'. ಅಷ್ಟೇ ಅಲ್ಲ, ನಾವು ಏನು ತಿನ್ನುತ್ತಿದ್ದೇವೆ ಎಂಬ ಅರಿವೂ ಅವರಿಗೆ ಇರುವುದಿಲ್ಲ. ಹೀಗಾಗಿ, ಹೆಚ್ಚು ತಿಂದು ದಪ್ಪಗಾಗ್ತಾರೆ. ಅದರ ಬದಲು ಸಹೋದ್ಯೋಗಿಗಳ ಜೊತೆ ಪ್ಯಾಂಟ್ರಿಗೆ ಹೋಗಿ ನಸುನಗುತ್ತಾ ಊಟ ಮಾಡಿ.

3. ಖಾಲಿ ಹೊಟ್ಟೆಯಲ್ಲಿ ಶಾಪಿಂಗ್ ಬೇಡ: ಹಸಿದ ಹೊಟ್ಟೆಯಲ್ಲಿ ಶಾಪಿಂಗ್`ಗೆ ತೆರಳಿದರೆ ಸ್ನಾಕ್ಸ್ ಸೇವನೆ ಹೆಚ್ಚುತ್ತದೆ.ಇದರಿಂದ ದೇಹಕ್ಕೆ ಕೊಬ್ಬಿನಾಮಸ ಸೇರುತ್ತೆ.

4. ಶಾಪಿಂಗ್`ಗೆ ತೆರಳುವ ಮುನ್ನ ಬರೆದಿಟ್ಟುಕೊಳ್ಳಿ: ಶಾಪಿಂಗ್`ಗ ತೆರಳುವ ಮುನ್ನ ಯಾವುದನ್ನ ಖರೀದಿಸಬೇಕೆಂಬ ಬಗ್ಗೆ ಸೂಕ್ತವಾಗಿ ಬರೆದಿಟ್ಟುಕೊಳ್ಳಿ. ಇಲ್ಲವಾದರೆ ಅನವಶ್ಯಕ ಆರೋಗ್ಯಕ್ಕೆ ಪೂರಕವಲ್ಲದ ಆಹಾರ ಖರೀದಿಸುವ ಸಾಧ್ಯತೆ ಹೆಚ್ಚು.

5. ರೆಸ್ಟೋರೆಂಟ್ ಮೆನು ಬಗ್ಗೆ ಗಮನವಿರಲಿ: ರೆಸ್ಟೋರೆಂಟ್`ಗೆ ಹೋದಾಗ ಮೆನು ಬಗ್ಗೆ ಗಮನವಿರಲಿ. ಬಾಯಿಗೆ ರುಚಿಯಾಗಿರುತ್ತೆ ಎಂದು ತಿನ್ನಬೇಡಿ. ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರಗಳ ಬಗ್ಗೆ ಗಮನವಿರಲಿ.

6.  ಫೇವರೀಟ್ ಫುಡ್ ಇರಲಿ: ಸಣ್ಣಗಾಗಬೇಕೆಂಬ ಷ್ಟವಾದ ಹಾರಗಳನ್ನ ತ್ಯಜಿಸಬೇಡಿ. ಇದರಿಂದ ಮಾನಸಿಕ ತ್ತಡ ಹೆಚ್ಚಾಗಿ ಬೇರೆ ಪರಿಣಾಮ ಬೀರುತ್ತದೆ.

7. ದಿನಕ್ಕೆ 5-6 ಬಾರಿ ತಿನ್ನಿ: ಒಟ್ಟಿಗೆ ಹೊಟ್ಟೆ ತುಂಬಾ ತಿನ್ನುವುದಕ್ಕಿಂತ ದಿನಕ್ಕೆ ಐದಾರು ಬಾರಿ ಸ್ವಲ್ಪ ಸ್ವಲ್ಪ ತಿನ್ನಿ. ಇದರಿಂದ ಹಸಿವು ಕಡಿಮೆಯಾಗಿ ಚಯಾಪಚಯ ಕ್ರಿಯೆ ಉತ್ತಮಗೊಂಡ ಕೊಬ್ಬಿನ ಶೇಖರಣೆ ತಗ್ಗುತ್ತೆ.

ವೆಬ್ದುನಿಯಾವನ್ನು ಓದಿ