ಬಾಯಿಯ ಸುತ್ತಲು ಇರುವ ಕಪ್ಪು ಕಲೆಯ ನಿವಾರಣೆ

ಶುಕ್ರವಾರ, 15 ಡಿಸೆಂಬರ್ 2017 (08:08 IST)
ಬೆಂಗಳೂರು: ಹೆಚ್ಚಿನ ಹುಡುಗಿಯರಿಗೆ ಬಾಯಿಯ ಸುತ್ತಲು ಕಪ್ಪು ಕಲೆಗಳಿರುವುದನ್ನು ನೋಡಿರುತ್ತೆವೆ. ಬಿಳಿಯಾಗಿರುವವರಲ್ಲಿ ಈ ಕಲೆ ಎದ್ದು ಕಾಣುತ್ತದೆ. ಎಷ್ಟೇ  ಕ್ರೀಂಗಳನ್ನು ಹಚ್ಚಿದರು ಅದು ನಿವಾರಣೆಯಾಗಿಲ್ಲವೆಂದರೆ ಈ ಮನೆಮದ್ದು ಮಾಡಿ ಹಚ್ಚಿ. ಇದರಿಂದ ಕ್ರಮೇಣ ಕಲೆ ಕಡಿಮೆಯಾಗುತ್ತದೆ.


ಅಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪುಡಿಮಾಡಿ. ಅದರಿಂದ 3 ಚಮಚ  ಹಿಟ್ಟುನ್ನು ತೆಗೆದುಕೊಂಡು  ಅದಕ್ಕೆ 2 ಚಮಚ ಮೈದಾ ಹಿಟ್ಟನ್ನು ಮಿಕ್ಸ ಮಾಡಿ  ಮತ್ತೆ ಅದಕ್ಕೆ 2 ಚಮಚ ಮೊಸರು ಹಾಗು ½ ಟೊಮೊಟ ರಸವನ್ನು ಹಾಕಿ ಪ್ಯಾಕ್ ರೆಡಿ ಮಾಡಿ. ನಂತರ ಅದನ್ನು ಬಾಯಿಯ ಸುತ್ತಲು ಹಚ್ಚಿಕೊಳ್ಳಿ. 20 ನಿಮಿಷದ ನಂತರ ಅದರ ಮೇಲೆ ನೀರು ಹಾಕಿ 1 ನಿಮಿಷದ ತನಕ ಚೆನ್ನಾಗಿ ಮಸಾಜ್ ಮಾಡಿ  ನಂತರ ತೊಳೆದು ಆಲೊವೆರಾ ಕ್ರೀಂ ಹಚ್ಚಿ.(ಇದನ್ನು ರಾತ್ರಿ ಮಲಗುವಾಗ ಮಾಡಿ)


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ