ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ರವಿ ಬೆಳಗೆರೆ
ರವಿ ಬೆಳಗೆರೆ ಅವರು ಜೈಲು ಸಿಬ್ಬಂದಿಯನ್ನು ನೀವು ಯಾರು? ನಾನೇಕೆ ಇಲ್ಲಿದ್ದೇನೆ ಅಂತಾ ಪ್ರಶ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ರವಿ ಬೆಳಗೆರೆ ಅವರಿಗೆ ಮೂರನೇ ಬ್ಯಾರಕ್ ನ ಒಂದನೇ ಕೊಠಡಿಯನ್ನು ನೀಡಲಾಗಿದ್ದು 12785 ಕೈದಿ ನಂಬರ್ ಕೊಡಲಾಗಿದೆ.
ರವಿ ಬೆಳಗೆರೆ ಬಿಪಿ, ಶುಗರ್‍ನಿಂದ ಬಳಲುತ್ತಿದ್ದರಿಂದ ಪರಪ್ಪನ ಅಗ್ರಹಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮನೆಯಿಂದಲೇ ತಂದಿದ್ದ ರಾಗಿ ಮುದ್ದೆ, ತರಕಾರಿ ಸಾಂಬಾರ್ ರವಿ ಬೆಳಗೆರೆಯವರಿಗೆ ನೀಡಲಾಗಿತ್ತು.