ಆಸೆ ವ್ಯಕ್ತಪಡಿಸದಿದ್ದರೆ ಸಂಭೋಗ ಸುಖ ಬರೀ ಕನಸು?

ಬುಧವಾರ, 2 ಅಕ್ಟೋಬರ್ 2019 (13:31 IST)
ಪ್ರಶ್ನೆ: ಯುವಕ, ಯುವತಿ, ಗಂಡಹೆಂಡತಿ ಅಥವಾ ಪ್ರಿಯತಮೆಪ್ರಿಯಕರನ ಸಂಬಂಧದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ತೃಪ್ತಿ ಸಿಗದೇ ಹೋಗಬಹುದುಇಂತಹ ಸಂದರ್ಭದಲ್ಲಿ ಏನು ಮಾಡೋದು?

ಉತ್ತರ: ಸಂಗಾತಿಗೆ ಬಯಸಿದ ಹಾಗೆ ಲೈಂಗಿಕ ಸುಖ ನೀಡಲಾಗುತ್ತಿಲ್ಲವಲ್ಲಾ? ಅಥವಾ ಸಂಗಾತಿಯಿಂದ ತಾನು ನಿರೀಕ್ಷಿಸಿದ ಹಾಗೆ ರತಿ ಸುಖ ಸಿಗುತ್ತಿಲ್ಲ ಎಂದು ಹಲವರು ತಮ್ಮಲ್ಲೇ ಕೊರಗುತ್ತಾರೆ. ಇದಕ್ಕೆ ಇರುವ ಪರಿಹಾರವೆಂದರೆ ಸಂವಹನ.

ಮಾತುಕತೆ ಮೂಲಕ ತಮ್ಮ ತಮ್ಮ ಅಗತ್ಯ, ನಿರೀಕ್ಷೆಗಳನ್ನು ದಂಪತಿ ಮುಕ್ತವಾಗಿ ಹಂಚಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಇಷ್ಟ ಕಷ್ಟಗಳು ಪರಸ್ಪರ ಅರಿತುಕೊಳ್ಳಲು ಸಾಧ್ಯವಿಲ್ಲ. ಎರಡನೆಯದಾಗಿ ಯಾವ ರೀತಿ ಲೈಂಗಿಕ ಜೀವನವನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮಾಡಬಹುದು ಎಂಬುದನ್ನು ಇಬ್ಬರೂ ಚರ್ಚಿಸಿ ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕು. ಇವೆರಡೂ ವರ್ಕೌಟ್  ಆಗದೇ ಇದ್ದಾಗ ವೈದ್ಯರ ಸಹಾಯ ಪಡೆಯುವುದು ಒಳ್ಳೆಯದು.

      



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ