ಅಕ್ಕಿ ಹಿಟ್ಟಿಗೆ ಇದನ್ನು ಬೆರೆಸಿ ಹಚ್ಚಿದರೆ ಮುಖದ ಅಂದ ಹೆಚ್ಚುತ್ತದೆ

ಶನಿವಾರ, 21 ಡಿಸೆಂಬರ್ 2019 (06:22 IST)
ಬೆಂಗಳೂರು : ಮುಖದ ಸೌಂದರ್ಯ ಕಾಪಾಡಲು ಹಲವರು ಹಲವು ತರಹದ  ಪ್ರಯತ್ನಗಳನ್ನುಮಾಡುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದೆ ಇದ್ದರೆ ಒಮ್ಮೆ ಇದನ್ನು ಬಳಸಿ ನೋಡಿ.



ಅಕ್ಕಿ ಹಿಟ್ಟಿನಲ್ಲಿ ಮೆಲನಿನ್ ಅಂಶವನ್ನು ಕಡಿಮೆ ಮಾಡುವ ಗುಣವಿದೆ. ಆದಕಾರಣ 1 ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಅದನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ . ಇದರಿಂದ ಮುಖ ಬೆಳ್ಳಗಾಗುತ್ತದೆ.


4 ಚಮಚ  ಅಕ್ಕಿ ಹಿಟ್ಟಿಗೆ, ಚಿಟಿಕೆ ಅರಶಿನ ಹಾಗೂ 3 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ