ಅರ್ಧಕ್ಕೆ ಶಿಕ್ಷಣ ಮುಗಿಸಿದವರಿಗೆ ಹೃದಯಾಘಾತವಾಗುವ ಸಂಭವ ಹೆಚ್ಚು!
ಮಂಗಳವಾರ, 20 ಡಿಸೆಂಬರ್ 2016 (09:28 IST)
ಬೆಂಗಳೂರು: ವಿಜ್ಞಾನಿಗಳು ಏನೆಲ್ಲಾ ಸಂಶೋಧನೆ ಮಾಡುತ್ತಾರೆ ನೋಡಿ. ಅರ್ಧಕ್ಕೆ ಶಿಕ್ಷಣಕ್ಕೆ ಗುಡ್ ಬೈ ಹೇಳುವ ಮಂದಿಗೆ ಹೃದಯಾಘಾತವಾಗುವ ಅಪಾಯ ಹೆಚ್ಚಿರುತ್ತದಂತೆ!
“ಇದು ವಿಚಿತ್ರವಾದರೂ ಸತ್ಯ. ಎಷ್ಟು ಕಡಿಮೆ ವಿದ್ಯಾಭ್ಯಾಸ ಮಾಡುತ್ತೀರೋ ಹೃದಯಾಘಾತವಾಗುವ ಸಂಭವವೂ ಜಾಸ್ತಿ” ಎಂದು ಆಸ್ಟ್ರೇಲಿಯನ್ ನೇಷನಲ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ.
ಸುಮಾರು 45 ರಿಂದ 60 ವರ್ಷ ವಯಸ್ಸಿನವರ ಮೇಲೆ ಪ್ರಯೋಗ ನಡೆಸಿ ಸಂಶೋಧಕರು ಇದನ್ನು ಕಂಡುಕೊಂಡಿದ್ದಾರೆ. ತೇರ್ಗಡೆಯಾದ ಸರ್ಟಿಫಿಕೇಟ್ ಪಡೆಯದೇ ಇರುವವರು, ಅರ್ಧಕ್ಕೆ ಶಿಕ್ಷಣ ನಿಲ್ಲಿಸುವವರು ಈ ಅಪಾಯಕ್ಕೆ ಸಿಲುಕುತ್ತಾರಂತೆ. ಎಸ್ಎಸ್ಎಲ್ ಸಿ ಮುಗಿಸಿದವರು 50 ಶೇಕಡಾ, ಯೂನಿವರ್ಸಿಟಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದವರಲ್ಲಿ ಶೇಕಡಾ 20 ರಷ್ಟು ಹೆಚ್ಚು ಹೃದಯಾಘಾತವಾಗುವ ಸಂಭವವಿದೆ ಎಂದು ಅವರು ಕಂಡುಕೊಂಡಿದ್ದಾರೆ. ಶಿಕ್ಷಣದ ಸಾಧನೆಗೂ ಹೃದಯರ ಆರೋಗ್ಯಕ್ಕೂ ಸಂಬಂಧವಿದೆ ಎಂಬುದು ಸಂಶೋಧಕರ ವಾದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ