ಬೆಂಗಳೂರು: ಮುಟ್ಟಿನ ಸಮಯದಲ್ಲಿ ರಕ್ತ ಸ್ರಾವದ ಬಗ್ಗೆ ಮಹಿಳೆಯರಲ್ಲಿ ಅನೇಕ ಗೊಂದಲಗಳಿರುತ್ತವೆ. ಕೆಲವೊಮ್ಮೆ ವಿಪರೀತ ರಕ್ತಸ್ರಾವವಾದಾಗ ನನಗೆ ಏನಾದರೂ ಸಮಸ್ಯೆಯಾಗಿದೆಯೇ ಎಂಬ ಆತಂಕದಿಂದ ಬಳಲುತ್ತಾರೆ.
ಒಂದು ವೇಳೆ ಒಂದೋ ಎರಡೋ ಬಾರಿ ಈ ರೀತಿ ಅಧಿಕ ರಕ್ತಸ್ರಾವವಾದರೆ ಅದು ಹಾರ್ಮೋನ್ ಗಳ ವೈಪರೀತ್ಯದಿಂದ ಆಗಿರಬಹುದು. ಇದಕ್ಕೆ ಹೆದರಬೇಕಾಗಿಲ್ಲ. ಆದರೆ ಪದೇ ಪದೇ ಹೀಗೆ ಆಗುತ್ತಿದ್ದರೆ ಅದಕ್ಕೆ ತಕ್ಕ ಚಿಕಿತ್ಸೆ ಪಡೆಯುವುದು ಮುಖ್ಯ.
ಹಾಗೆಯೇ ಈ ರೀತಿ ವಿಪರೀತ ರಕ್ತ ಸ್ರಾವ ಅಥವಾ ಕಡಿಮೆ ರಕ್ತ ಸ್ರಾವವಾಗುವುದರಿಂದ ದೇಹದ ಗಾತ್ರದ ಮೇಲೆ (ಬೊಜ್ಜು ಬೆಳೆಯುವುದು ಇತ್ಯಾದಿ) ಯಾವುದೇ ಪರಿಣಾಮ ಬೀರದು.