ಬೆಂಗಳೂರು : ಬಾಳೆಹಣ‍್ಣು ಆರೋಗ್ಯಕ್ಕೆ ಉತ್ತಮ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಮಧುಮೇಹಿಗಳಿಗೆ ಬಾಳೆ ಹೂ ಮತ್ತು ಬಾಳೆ ಹಣ‍್ಣಿನ ಸಿಪ್ಪೆಗಳು ತುಂಬಾ ಸಹಕಾರಿಯಾಗಿವೆ ಎಂಬುದು ಸಂಶೋಧನೆಯಿಂ ದ ತಿಳಿದುಬಂದಿದೆ.
ಸಂಶೋಧನೆ ಪ್ರಕಾರ ಬಾಳೆ ಹಣ‍್ಣಿನ ಸಿಪ್ಪೆಯಲ್ಲಿ ಮೆಗ್ನಿಶಿಯಂ, ವಿಟಮಿನ್ ಸಿ,ವಿ, ಪೊಟ್ಯಾಶಿಯಂಗಳನ್ನು ಹೊಂದಿದೆ. ಹಾಗೇ ಇದರಲ್ಲಿರುವ ಫ್ಲೇವನಾಯ್ಡ್ ಗಳಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬಾಳೆಹಣ್ಣಿನ ಸಿಪ್ಪೆಯನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಕುದಿಸಿ ಸೇವಿಸಿ. ಇದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಆದರೆ ಈಗಾಗಲೇ ಮಧುಮೇಹಕ್ಕೆ ಔಷಧ ಸೇವಿಸುವವರು ಇದನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.