ಮಚ್ಚೆಗಳ ಮೇಲೆ ಕೂದಲು ಬೆಳೆಯುವುದು ಕ್ಯಾನ್ಸರ್ ಕಾರಕವೇ?

ಶುಕ್ರವಾರ, 6 ಡಿಸೆಂಬರ್ 2019 (06:31 IST)
ಬೆಂಗಳೂರು : ದೇಹದಲ್ಲಿ ಮಚ್ಚೆಗಳು ಮೂಡುವುದು ಸಾಮಾನ್ಯ. ಇದು ಕಂದು, ಕಪ್ಪು, ಕೆಂಪು ಬಣ್ಣದಿಂದ ಕೂಡಿರುತ್ತದೆ. ಕೆಲವೊಮ್ಮೆ ಈ ಮಚ್ಚೆಗಳ ಮೇಲೆ ಕೂದಲು ಬೆಳೆಯುತ್ತದೆ. ಇದು ಕ್ಯಾನ್ಸರ್ ಕಾರಕ ಎಂದು ಹೇಳಲಾಗುತ್ತದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.



ಚರ್ಮಶಾಸ್ತ್ರಜ್ಞರು ಹಾಗೂ ಕೆಲವು ಅಧ್ಯಯನಗಳ  ಪ್ರಕಾರ ಮಚ್ಚೆಗಳ ಮೇಲೆ ಕೂದಲು ಬೆಳೆಯುವುದು ಕ್ಯಾನ್ಸರ್ ಕಾರಕವಲ್ಲ ಎನ್ನಲಾಗಿದೆ. ಆದರೆ ಕೆಲವೊಮ್ಮೆ ಮಚ್ಚೆಯು  ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯಬಾರದು ಎಂದೆನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಹೇಳುವಂತೆ ಮಚ್ಚೆಯ ಮೇಲ್ಮೈ ಮೇಲಿನ ಅಂಗಾಂಶವು ಅಸಾಮಾನ್ಯವಾಗಿ, ಅದು ಕೂದಲು ಬೆಳವಣೆಗೆಗೆ ಸಹಕರಿಸುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ