ಮೊಳಕೆ ಬಂದ ಬೆಳ್ಳುಳ್ಳಿ ಸೇವಿಸುವುದು ಅಪಾಯವೇ?

ಬುಧವಾರ, 25 ಜುಲೈ 2018 (09:28 IST)
ಬೆಂಗಳೂರು: ಮೊಳಕೆ ಬಂದ ಆಲೂಗಡ್ಡೆ ಸೇವಿಸುವುದು ವಿಷಕಾರಿ ಎನ್ನುತ್ತಾರೆ. ಅದೇ ರೀತಿ ಮೊಳಕೆ ಬಂದ ಬೆಳ್ಳುಳ್ಳಿ ಸೇವನೆಯಿಂದ ಅಪಾಯವಿದೆಯೇ? ಇಲ್ಲಿದೆ ಸತ್ಯಾಂಶ.
 

ಮೊಳಕೆ ಬಂದ ಬೆಳ್ಳುಳ್ಳಿ ವಿಷಕಾರಿ ಏನೂ ಅಲ್ಲ. ಆಲೂಗಡ್ಡೆ ಮೊಳಕೆ ಬಂದಿರುವುದನ್ನು ಸೇವಿಸಿದರೆ ನರಗಳಿಗೆ ತೊಂದರೆ. ಆದರೆ ಬೆಳ್ಳುಳ್ಳಿ ವಿಚಾರದಲ್ಲಿ ಹಾಗಲ್ಲ.

ಆದರೆ ಮೊಳಕೆ ಬಂದ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಬೆರೆಸುವುದರಿಂದ ರುಚಿಕೆಡಬಹುದು. ಹೀಗಾಗಿ ಬೆಳ್ಳುಳ್ಳಿಯನ್ನು 10 ದಿನಕ್ಕಿಂತ ಹೆಚ್ಚು ಶೇಖರಿಸಿಟ್ಟು ಬಳಸುವುದು ಒಳ್ಳೆಯದಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಇದು ಆಹಾರಕ್ಕೆ ಕಹಿ ರುಚಿಯನ್ನೂ ಕೊಡಬಹುದು ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ