ನಿಂಬೆಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ?

ಸೋಮವಾರ, 23 ಜುಲೈ 2018 (18:33 IST)
ನಮ್ಮ ದೈನಂದಿನ ವಿದ್ಯಮಾನದಲ್ಲಿ ಬಳಕೆಯಾಗುವ ವಸ್ತುಗಳಲ್ಲಿ ನಿಂಬೆಯೂ ಒಂದು. ನಿಂಬೆಯನ್ನು ನಾವು ಹಣ್ಣು ಎಂದೂ ಒಂದು ಬಗೆಯ ತರಕಾರಿ ಎಂದೂ ಹೇಳಬಹುದು.ನಿಂಬೆಯಲ್ಲಿ ಸಿ ಜೀವಸತ್ವವಿರುವುದರಿಂದ ಇದನ್ನು ಸಿಟ್ರಸ್ ಹಣ್ಣುಗಳ ಸಾಲಿನಲ್ಲಿ ಸೇರಿಸಲಾಗಿದೆ.

ನಿಂಬೆಯು "ಲೆಮೆನ್ಸ ರುಟೇಶೀಯಾ" ಕುಟುಂಬಕ್ಕೆ ಸೇರಿದ್ದು, ಏಷ್ಯಾದ ನಿತ್ಯಹರಿದ್ವರ್ಣ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ನಿಂಬೆಯ ಒಳಭಾಗವು ಹುಳಿಯಾಗಿದ್ದು, ಅದರ ಉಲ್ಲಾಸಕರವಾದ ವಾಸನೆಯಿಂದಾಗಿ ಮತ್ತು ಟಾರ್ಟ್ ಪರಿಮಳದ ಕಾರಣದಿಂದಾಗಿ ಇತರ ಪದಾರ್ಥಗಳು ಮತ್ತು ಭಕ್ಷ್ಯಗಳಿಗೆ ರುಚಿ ಸೇರಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆಸುತ್ತುವುದು, ವಾಕರಿಕೆ ಬಂದಂತಾಗುವುದು, ನಿಶ್ಯಕ್ತಿಯಾದಾಗ ಹೀಗೆ ತುರ್ತು ಪರಿಸ್ಥಿತಿಯಲ್ಲಿ ನಿಂಬೆಯಿಂದ ಶಮನವಾಗುತ್ತದೆ. ಇಂತಹ ನಿಂಬೆಯ ಇನ್ನೂ ಆರೋಗ್ಯ ಪ್ರಯೋಜನಗಳನ್ನು ನೋಡೋಣ....
 
* ದಂತದ ಆರೋಗ್ಯದಲ್ಲಿ ನಿಂಬೆಯು ಪ್ರಮುಖ ಪಾತ್ರ ವಹಿಸುತ್ತದೆ. ಹಲ್ಲು ನೋವು ಕಾಣಿಸಿಕೊಂಡಾಗ ನೋವಿರುವ ಹಲ್ಲಿನ ಮೇಲೆ ನಿಂಬೆ ರಸವನ್ನು ಹಚ್ಚಿದರೆ ಕ್ರಮೇಣ ನೋವು ಕಡಿಮೆಯಾಗುತ್ತದೆ. ಮತ್ತು ಒಸಡುಗಳಲ್ಲಿ ರಕ್ತಸ್ರಾವವಾದಾಗಲೂ ಸಹ ನಿಂಬೆ ರಸವನ್ನು ಗಮ್ ಮೇಲೆ ಉಜ್ಜಿದಾಗ ರಕ್ತಸ್ರಾವವು ನಿಲ್ಲುತ್ತದೆ.
 
* ನಿಂಬೆಯು ದೇಹದಲ್ಲಿ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇರಿಸಲು ಸಹಾಯಕಾರಿಯಾಗಿದೆ.
 
* ಸೋಂಕುಗಳು ಮತ್ತು ರೋಗಗಳನ್ನು ಉಂಟುಮಾಡುವ ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗಳನ್ನು ತಡೆಯಲು ಸಹಕಾರಿಯಾಗಿದೆ.
 
* ನಿಂಬೆಯಲ್ಲಿನ ಪೊಟ್ಯಾಸಿಯಮ್ ಅಂಶವು ಮೆದುಳು ಮತ್ತು ನರಕೋಶಗಳನ್ನು ಪೋಷಿಸುತ್ತದೆ.
 
* ನಿಂಬೆಯು ಪಿತ್ತಜನಕಾಂಗದ ಕಿಣ್ವಗಳಿಗೆ ಶಕ್ತಿಯನ್ನು ನೀಡುವ ಮೂಲಕ ಯಕೃತ್ತನ್ನು ಬಲಪಡಿಸುತ್ತದೆ. 
 
* ವಿಟಾಮಿನ್ ಸಿ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗದ ಚಿಕಿತ್ಸೆಯಲ್ಲಿ ನಿಂಬೆಹಣ್ಣನ್ನು ಬಳಸಲಾಗುತ್ತದೆ.
 
* ನಿಂಬೆಹಣ್ಣುಗಳು ಪೆಕ್ವಿನ್ ಫೈಬರ್ ಅನ್ನು ಹೊಂದಿರುವುದರಿಂದ ಇದು ಕೊಲೋನ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಇವು ಪ್ರಬಲವಾದ ಬ್ಯಾಕ್ಟೀರಿಯಾದಂತೆಯೂ ಕಾರ್ಯನಿರ್ವಹಿಸುತ್ತದೆ.
 
* ನಿಂಬೆಹಣ್ಣುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಪಿತ್ತರಸದ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ.
 
* ಚರ್ಮದ ಹಾನಿಯ ಚಿಕಿತ್ಸೆಯಲ್ಲಿ, ಚರ್ಮದ ವಿನ್ಯಾಸವನ್ನು ಸುಧಾರಿಸುವಲ್ಲಿ ಮತ್ತು ಚರ್ಮದ ಸುಕ್ಕು ಕಡಿಮೆ ಮಾಡುವಲ್ಲಿ ನಿಂಬೆಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ.
 
* ನಿಂಬೆ ರಸ ಮತ್ತು ತಾಜಾ ತೆಂಗಿನ ನೀರಿನ ಮಿಶ್ರಣವನ್ನು ನೆತ್ತಿಗೆ ಹಚ್ಚುವುದರಿಂದ ದಪ್ಪ ಹಾಗೂ ಹೊಳಪಿನ ಕೂದಲನ್ನು ಪಡೆಯುವಲ್ಲಿ ನಿಂಬೆಹಣ್ಣುಗಳು ಉಪಯೋಗಕರವಾಗಿದೆ.
* ನಿಂಬೆಹಣ್ಣುಗಳು ದೇಹದ ನಿರ್ಜಲೀಕರಣವನ್ನು ಕಡಿಮೆಗೊಳಿಸುತ್ತದೆ.
 
* ನಿಂಬೆಹಣ್ಣುಗಳು ಅಧಿಕ ರಕ್ತದೊತ್ತಡ, ತಲೆತಿರುಗುವಿಕೆ, ವಾಕರಿಕೆ, ಒತ್ತಡ ಮತ್ತು ಖಿನ್ನತೆಯನ್ನೂ ಸಹ ಕಡಿಮೆಗೊಳಿಸುತ್ತದೆ
 
* ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಪಾರ್ಶ್ವವಾಯುವಿನ ಅಪಾಯವನ್ನೂ ಸಹ ನಿಂಬೆಹಣ್ಣುಗಳು ಕಡಿಮೆಗೊಳಿಸುತ್ತವೆ.
 
* ಬೆಚ್ಚಗಿನ ನೀರು ಮತ್ತು ಜೇನುತುಪ್ಪದೊಂದಿಗೆ ನಿಂಬೆರಸವನ್ನು ಬೆರೆಸಿ ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
 
* ನಿಂಬೆಹಣ್ಣಿನಲ್ಲಿ ವಿಟಾಮಿನ್ ಸಿ ಅಧಿಕವಾಗಿರುವುದರಿಂದ ದೀರ್ಘಕಾಲದ ಉಸಿರಾಟದ ಅಸ್ವಸ್ಥತೆಯನ್ನು ನಿಭಾಯಿಸಲು ಅಸ್ತಮಾದಂತಹ ತೊಂದರೆಗಳಿಗೆ ಪರಿಹಾರ ಒದಗಿಸುತ್ತದೆ. ಮತ್ತು ಗಂಟಲು ಸೋಂಕಿನ ಚಿಕಿತ್ಸೆಯಲ್ಲೂ ನಿಂಬೆಹಣ್ಣುಗಳು ಸಹಾಯಕವಾಗಿದೆ.
 
* ಮೊಣಕೈಗಳು ಕಪ್ಪಾಗಿದ್ದರೆ, ಮೊಣಕೈಗೆ ನಿಂಬೆ ಹಣ್ಣಿನ ತೊಗಟನ್ನು ಉಜ್ಜುವುದರಿಂದ ಕಪ್ಪಾಗುವಿಕೆಯು ಕಡಿಮೆಯಾಗುತ್ತದೆ.
 
ನಿಂಬೆಯು ಗರಿಷ್ಟ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ ಇದು ಪ್ರಕೃತಿಯ ವರದಾನ ಎಂದೇ ಹೇಳಬಹುದು. ಆದರೆ ಯಾವುದೇ ರೋಗವನ್ನು ನಾವು ಗುಣಪಡಿಸಿಕೊಳ್ಳಬೇಕಾದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ