ಬೆಂಗಳೂರು: ನಿಮ್ಮ ದೇಹದದಲ್ಲಿ ಉಷ್ಣಾಂಶ ಹೆಚ್ಚಾದರೆ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತದೆ.. ಆದ್ದರಿಂದ ದೇಹವನ್ನು ತಂಪುಗೊಳಿಸಲು ಮನೆಯಲ್ಲೇ ಸಿಗುವ ಪದಾರ್ಥಗಳ ಪಾನಕ ಸೇವಿಸಿ.
ಸೌತೆಕಾಯಿ-ಪಾನಕ: ಸೌತೆಕಾಯಿ ಹೆಚ್ಚಿಕೊಂಡು ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಅರೆಯುವುದು. ಇದಕ್ಕೆ ನೀರು ಬೆರೆಸಿ ತದನಂತರ ಸ್ವಲ್ಪ ಲಿಂಬೆರಸ ಒಂದು ಚಮಚ ಇಸುಬುಕೋಲ್ ಬೆರೆಸಿದರೆ ಕುಡಿಯಲು ಸಿದ್ಧ. ಉಪಯೋಗಗಳು: ಉರಿಮೂತ್ರ ನಿವಾರಣೆಗೆ ಉಪಯುಕ್ತ. ಅಧಿಕ ರಕ್ತದೊತ್ತಡ ನಿವಾರಿಸಲು ಉತ್ತಮ. ಕಣ್ಣುರಿಯಿಂದ ಬಚಾವ್ ಆಗಬಹುದು. ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ.
ಹೆಸರು ಕಾಳು ಪಾನಕ: ಒಂದು ಕಪ್ ಹುರಿದ ಹೆಸರು ಕಾಳನ್ನು 4 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಬೇಕು. ಅದಕ್ಕೆ 4 ಕಪ್ ನೀರು ಹಾಗೂ ಎರಡು ಕಪ್ ಬೆಲ್ಲ ಬೆರೆಸಬೇಕು. ಒಂದು ಕಪ್ ಹೆಸರು ಬೇಳೆಯನ್ನು ಒಂದು ಗಂಟೆಕಾಲ ನೀರಲ್ಲಿ ನೆನೆಸಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ 4 ಕಪ್ ನೀರು, 2 ಕಪ್ ಬೆಲ್ಲ ಸೇರಿಸಿ ಮತ್ತೆ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿದರೆ ಕುಡಿಯಲು ಸಿದ್ಧ. ಉಪಯೋಗಗಳು: ಕಿಡ್ನಿಯ ತೊಂದರೆಗಳಿಂದ ಪಾರಾಗಬಹುದು. ಮಾಂಸ-ಖಂಡಗಳ ನೋವುಗಳ ನಿವಾರಣೆಗೆ ಸಹಕಾರಿ. ದೇಹಕ್ಕೆ ತಂಪನ್ನು ನೀಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ