ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಗೋಡಂಬಿ, ಬಾದಾಮಿ ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಇದಕ್ಕೆ ತುರಿದ ಸೌತೆಕಾಯಿ ಹಾಕಿ ಮಧ್ಯಮ ಉರಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಹಾಲು ಸೇರಿಸಿ ಮಿಶ್ರಣ ಮಾಡಿ ಕುದಿಯಲು ಬಿಡಿ. ತದನಂತರ ಬಾಣಲೆಯಲ್ಲಿ ಹಾಲಿನ ಮಿಶ್ರಣವು ಕುದಿಯುತ್ತಿದ್ದಂತೆ ಸಕ್ಕರೆ, ಕಂಡೆನ್ಸ್‌ಡ್ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿದರೆ ರುಚಿಕರ ಹಾಗು ಆರೋಗ್ಯಕರ ಸೌತೆಕಾಯಿ ಪಾಯಸ ಸೇವಿಯಲು ಸಿದ್ಧ.
ಮಾಡುವ ವಿಧಾನ:
ಒಂದು ಬಟ್ಟಲಲ್ಲಿ ಕಡಲೆ ಹಿಟ್ಟು, ಖಾರ ಪುಡಿ, ಜೀರಿಗೆ, ಉಪ್ಪು, ಅಡುಗೆ ಸೋಡ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಿಸಿ ಹಿಟ್ಟು ಸ್ವಲ್ಪ ಗಟ್ಟಿಯಾಗಿರಲಿ ನಂತರ ಒಂದು ಬಾಣಲಿಯಲ್ಲಿ ಸಾಕಷ್ಟು ಎಣ್ಣೆಯನ್ನು ಹಾಕಿ ಕಾಯಿಸಿ. ತದನಂತರ ಸೌತೆಕಾಯಿ ತುಂಡುಗಳನ್ನು ಮಿಶ್ರಣ ಮಾಡಿದ ಹಿಟ್ಟಿನಲ್ಲಿ ಅದ್ದಿಸಿ ಕಾದ ಎಣ್ಣೆಗೆ ಹಾಕಿ, ಕಂದು ಬಣ್ಣ ಬರುವ ತನಕ ಹುರಿದರೆ ರುಚಿಕರ ಸೌತೆಕಾಯಿ ಪಕೋಡ ಸಿದ್ಧ.