ಆಹಾ.. ನಯನ ಎಂಥಾ ಮನೋಹರ..!

ಬುಧವಾರ, 8 ಫೆಬ್ರವರಿ 2017 (10:11 IST)
ಬೆಂಗಳೂರು: ಕಣ್ಣು ಮನುಷ್ಯನ ಅವಯವಗಳಲ್ಲಿ ಸೂಕ್ಷ್ಮವಾದ ಮತ್ತು ಅತೀ ಮುಖ್ಯವಾದುದು. ಇದನ್ನು ಅಷ್ಟೇ ಜೋಪಾನವಾಗಿ ಸುರಕ್ಷಿತವಾಗಿಡುವುದು ಮುಖ್ಯ. ಕಣ್ಣಿನ ಆರೋಗ್ಯ ರಕ್ಷಣೆಗೆ ಏನೆಲ್ಲಾ ಮಾಡಬಹುದು ನೋಡಿ.

 
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರೇ. ಹೆಚ್ಚು ಹೊತ್ತು ಕಂಪ್ಯೂಟರ್ ಸ್ಕ್ರೀನ್ ನೋಡುತ್ತಿದ್ದಲ್ಲಿ ಕಣ್ಣು ನೋವು, ಉರಿ, ತಲೆ ನೋವಿನಂತಹ ಸಮಸ್ಯೆ ಸಾಮಾನ್ಯ. ಹಾಗಾಗಿ ಇಂತಹ ಕೆಲಸ ಮಾಡುವವರು ಅಗತ್ಯವಾಗಿ ನಿಯಮಿತವಾಗಿ ವಿರಾಮ ತೆಗೆದುಕೊಳ್ಳುವುದು, ಆಗಾಗ ಕಣ್ಣು ಮುಚ್ಚಿ ತೆರೆದು ವ್ಯಾಯಾಮ ಮಾಡುವುದು ಅಗತ್ಯ.

ಕಣ್ಣಿನ ಆರೋಗ್ಯ ನಾವು ತಿನ್ನುವ ಆಹಾರದಲ್ಲಿದೆ. ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್ ಸಿ, ಇ ಹೇರಳವಾಗಿ ಸಿಗುವ ಆಹಾರ ಪದಾರ್ಥಗಳನ್ನು ತಿಂದರೆ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ.  ಆದಷ್ಟು ಸೊಪ್ಪು ತರಕಾರಿ, ಹಸಿ ತರಕಾರಿ, ಕ್ಯಾರೆಟ್ ನಂತಹ ತರಕಾರಿಗಳ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಧೂಮಪಾನ ಮಾಡುವುದೂ ಕಣ್ಣಿನ ಆರೋಗ್ಯವನ್ನು ಹಾಳು ಮಾಡಬಹುದು. ಧೂಮಪಾನ ಆಪ್ಟಿಕ್ ನರಗಳನ್ನು ಹಾಳು ಮಾಡಬಹುದು. ಬಿಸಿಲಿನಲ್ಲಿ ಓಡಾಡುವಾಗ ಕಣ್ಣಿಗೆ ತಂಪು ಕನ್ನಡಕ ಧರಿಸಿ ಓಡಾಡುವುದು ಕಣ್ಣುರಿಯಂತಹ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಏನೇ ಆಗಲಿ ನಿಮ್ಮ ಕಣ್ಣು ನಿಮ್ಮ ಜೀವನದ ದಾರಿ. ಜೋಪಾನ ಮಾಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ