ಎಚ್ಚರ! ಜೀವಕ್ಕೆ ಮಾರಕವಾಗದಿರಲಿ ಬಾಡಿಫಿಟ್ನೆಸ್

ಮಂಗಳವಾರ, 6 ಸೆಪ್ಟಂಬರ್ 2016 (12:10 IST)
ಸ್ನಾಯುಗಳನ್ನು ತೋರುತ್ತಾ ತಮ್ಮ ಬಾಡಿ ಫಿಟ್ನೆಸ್ ಪ್ರದರ್ಶಿಸುವ ಸಲ್ಮಾನ್ ಖಾನ್, ಹೃತಿಕ್ ರೋಶನ್, ಅಮೀರ್ ಖಾನ್, ಕನ್ನಡದಲ್ಲಿ ಶಿವರಾಜ್ ಕುಮಾರ್ ವಿಜಯ್ ಹೀಗೆ ಪ್ರತಿಯೊಬ್ಬರೂ ತಮ್ಮ ಸ್ನಾಯುಗಳನ್ನು ಅವರ ಅಭಿಮಾನಿಗಳಿಗೆಂದು ಹುರಿ ಮಾಡುತ್ತಾರೆ.ಇವರನ್ನು ಅನುಕರಿಸುವ ಯುವಪೀಳಿಗೆಯು ಇಂತಹ ಸಾಹಸಗಳಿಗೆ ಕೈ ಹಾಕಲು ಹೋಗಿ ಉಪಯೋಗಕ್ಕಿಂತ ಹೆಚ್ಚಾಗಿ ತೊಂದರೆ ಅನುಭವಿಸುವ ಸಾಧ್ಯತೆಯ ಮಟ್ಟ ಹೇರಳವಾಗಿದೆ. 
ಅವರು ಸಾಮಾನ್ಯವಾಗಿ ಅನ್ ಸೈಟಿಂಫಿಕ್ ವಿಧಾನದ ಮೂಲಕ ತಮ್ಮ ಕಟ್ಸ್ ಮತ್ತು ಬೈಸೆಪ್ಸ್ ಗಳಿಗೆ ಸುಂದರ ಆಕಾರ ನೀಡಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಸ್ನಾಯುಗಳ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತದೆ. 
 
ಕೆಲವರು ತಮ್ಮ ಸ್ನಾಯುಗಳು ಶೀಘ್ರವಾಗಿ ದೊಡ್ಡದಾಗಬೇಕು ಎಂದು ಬಯಸಿ ಅತಿಯಾದ ಭಾರ ಹೊತ್ತು ವ್ಯಯಾಮ ಮಾಡುತ್ತಾರೆ. ಆದರೆ ಈ ವಿಧಾನ ಎಂದಿಗೂ ಸರಿಯಲ್ಲ. ಇದು ಸಹ ಆರೋಗ್ಯಕ್ಕೆ ಮಾರಕ. ಹೀಗೆ ಹೆಚ್ಚು ಪ್ರಮಾಣದ ಭಾರ ಹೊರುವುದರಿಂದ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹಾಗೆ ಮಾಡುವುದಕ್ಕಿಂತ ಕಡಿಮೆ ಭಾರದಿಂದ ಕೂಡಿದ ತೂಕವನ್ನು ಬಳಸಿ ಹೆಚ್ಚು ಕಾಲ ವ್ಯಾಯಾಮ ಮಾಡುವುದು ಎಲ್ಲ ರೀತಿಯಿಂದಲೂ ಸೂಕ್ತ ಎನ್ನುತ್ತಾರೆ ಫಿಟ್ನೆಸ್ ತರಬೇತುದಾರರು. ಕಡಿಮೆ ತೂಕ ಬಳಸಿ ದಣಿವು ಆಗುವ ತನಕ ವ್ಯಾಯಾಮ ಮಾಡಿದರೆ ಒಳಿತು. 
 
ಅಲ್ಲದೆ ಪ್ರೋಟೀನ್ ಸೇವನೆ ಮತ್ತು ಪೂರಕ ವ್ಯಾಯಮದಿಂದ ಸ್ನಾಯುಗಳಲ್ಲಿ ದೃಢತೆ ಉಂಟಾಗುತ್ತದೆ. ನೀವು ಮಾಡುವ ಎಕ್ಸರ್ ಸೈಜ್ ಗೆ ಬಳಸುವ ಭಾರವು ನೀವು ಹೊರಲು ಆರಾಮದಾಯಕವಾಗಿರಬೇಕು. ಅಂದರೆ ನೀವು ಮಾಡುವ ಎಕ್ಸರ್ ಸೈಜ್ ಕನಿಷ್ಠ 20 ಬಾರಿಯಾದರೂ ಮಾಡಲು ಆಗುವಂತಿರ ಬೇಕು. ಅದರ ಭಾರ ಹಗುರವಾಗಿದ್ದಾಗ ಮಾತ್ರ ನಿಮ್ಮ ಸ್ನಾಯುಗಳು ಸುಂದರ ರೂಪ ಮತ್ತು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ