ಬೆಂಗಳೂರು : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಮಕ್ಕಳು ಕ್ಯಾರೆಟ್ ತಿನ್ನಲು ಇಷ್ಟಪಡುವುದಿಲ್ಲ. ಆದಕಾರಣ ಮಕ್ಕಳಿಗೆ ಕ್ಯಾರೆಟ್ ಮಿಠಾಯಿ ಮಾಡಿ ಕೊಡಿ.
ಬೇಕಾಗುವ ಸಾಮಾಗ್ರಿಗಳು : ½ ಕೆಜಿ ಕ್ಯಾರೆಟ್, 1 ಕೆಜಿ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ, 2 ಕಪ್ ಕೊಬ್ಬರಿ ತುರಿ, 8 ಚಮಚ ತುಪ್ಪ, ಸ್ವಲ್ಪ ಗೋಡಂಬಿ, ¼ ಲೋಟ ಹಾಲು .
ಮಾಡುವ ವಿಧಾನ : ಸಕ್ಕರೆ , ಕೊಬ್ಬರಿ ತುರಿ, ಕ್ಯಾರೆಟ್, ಹಾಲು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಇದನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬೇಯಿಸಿ. ಇದಕ್ಕೆ ತುಪ್ಪವನ್ನು ಸೇರಿಸಿಕೊಳ್ಳಬೇಕು. ಅದು ಪಾಕವಾಗುತ್ತಿದ್ದಂತೆ ಅದಕ್ಕೆ ಏಲಕ್ಕಿ ಪುಡಿ ಹಾಕಿ, ತುಪ್ಪ ಸವರಿದ ಪಾತ್ರೆಗೆ ಸುರಿದು ಸ್ವಲ್ಪ ಹೊತ್ತಲೆ ಚಾಕುವಿನಿಂದ ಕತ್ತರಿಸಿ ಗೋಡಂಬಿಯಿಂದ ಅಲಂಕರಿಸಿದರೆ ಕ್ಯಾರೆಟ್ ಮಿಠಾಯಿ ರೆಡಿ.