ಭಾರ ಹೆಚ್ಚಾಗಿ ಹೊಟ್ಟೆ ಮುಂದೆ ಬಂದ ಸಮಸ್ಯೆ ಎದುರಿಸುತ್ತಿದ್ದಿರಾ? ಹಾಗಾದರೆ ಈ ಲೇಖನ ಓದಿ

ಶನಿವಾರ, 23 ಆಗಸ್ಟ್ 2014 (17:10 IST)
ಹೆಚ್ಚುತ್ತಿರುವ ದೇಹದ ಬಾರ ಮತ್ತು ಮುಂದೆ ಬಂದ ಹೊಟ್ಟೆಯಿಂದ ಕೆಲವರು ಚಿಂತಿತರರಾಗುತ್ತಾರೆ. ಬನ್ನಿ ಹೆಚ್ಚುತ್ತಿರುವ ಸೊಂಟ ಮತ್ತು ಹೊರ ಬಂದಿರುವ ಹೊಟ್ಟೆಯನ್ನು ಕರಗಿಸುವ ಕೆಲವು ಉತ್ತಮ ವ್ಯಾಯಾಮಗಳನ್ನು ತಿಳಿದುಕೊಳ್ಳೊಣ. 
 
1) ವಾರದಲ್ಲಿ ಕಡಿಮೆ ಎಂದರೆ ಮೂರು ದಿನಗಳ ಕಾಲ ಸ್ಟ್ರೆಂಥ್ ಟ್ರೇನಿಂಗ್‌‌ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ಶರೀರ ಅಧಿಕವಾಗಿ ಕ್ಯಾಲೋರಿ ಖರ್ಚು ಮಾಡುತ್ತದೆ ಮತ್ತು ನೀವು ಮೊಟಾಬೊಲಿಜ್ಮ  ರೂಪದಲ್ಲಿ ಸರಾಗವಾಗಿ ಕಾರ್ಯನಿರ್ವಹಿಸಬಹುದು. 
 
2) ಕ್ರಂಚೆಸ್‌, ವಿಂಡ್‌ ಮಿಲ್‌‌, ಟಕ್ರಿಶ್‌ ಸಿಟ್‌ ಮಮತ್ತು ಲೆಗ್‌ ಎಕ್ಸರ್‌‌ಸೈಜ್‌‌‌ ಕಡೆಗೆ ಹೆಚ್ಚಿನ ಲಕ್ಷ ವಹಿಸಿ. 
 
3) ವಾರದಲ್ಲಿ 2-3 ದಿನ ರನ್ನಿಂಗ್‌ ಮಾಡಿ  ಮತ್ತು 10-20 ನಿಮಿಷಗಳ ಕಾಲ ಅಧಿಕ ಪರಿಶ್ರಮದ ವ್ಯಾಯಾಮ ಮಾಡಿ.
 
4) ನಿಮ್ಮ ದಿನಚರ್ಯವನ್ನು ಅಧಿಕವಾಗಿ ಸಕ್ರೀಯವನ್ನಾಗಿಸಿಕೊಳ್ಳಿ. ಮಕ್ಕಳ ಜೊತೆ ಆಡುವುದು ಮತ್ತು  ಅಡ್ಡಾಡಲು ಸಮಯ ನೀಡಿ. 
 
5)  ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿ. 
 
6) ಧ್ಯಾನ ಮತ್ತು ಪ್ರಾಣಾಯಾಮ ಮಾಡಿ. ಇದು ನಿಮ್ಮ ಶರೀರದ ಕೊಲೆಸ್ಟ್ರೊಲ್‌ ಸ್ಥರ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
 
7) ಅಧಿಕವಾಗಿ ಪ್ರೊಟಿನ್‌ ಮತ್ತು ಫೈಬರ್‌‌‌ವಿರುವ ಆಹಾರಗಳಾದ ಬೆಳೇ, ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಸಲಾಡ್‌‌ ಸೇವಿಸಿ. ಹಸಿರು ತರಕಾರಿ ಮತ್ತು ಸಲಾಡ್‌‌‌ನಲ್ಲಿರುವ ಫೈಬರ್‌‌‌ ನಿಮ್ಮ ಶರೀರದಲ್ಲಿರುವ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೈಪರ್‌ಟೆನ್ಶನ್‌‌ ಮತ್ತು ಒತ್ತಡದಿಂದ ರಕ್ಷಣಣೆ ನೀಡುತ್ತದೆ. 
 
8) ಹೆಚ್ಚು ನೀರು ಕುಡಿಯಿರಿ. ನೀರು ನಿಮ್ಮ ಶರೀರದ ಉಷ್ಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ