ಅಪರಿಚಿತರೊಂದಿಗೂ ಲೈಂಗಿಕ ಕ್ರಿಯೆ ಮಾಡಬೇಕೆನಿಸುತ್ತದೆ! ಇದು ತಪ್ಪೇ?

ಬುಧವಾರ, 17 ಜುಲೈ 2019 (09:06 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ. ಹಾಗೇ ಲೈಂಗಿಕತೆ ಬಗ್ಗೆ ಅತಿಯಾದ ಉತ್ಸಾಹ, ಅತಿಯಾದ ಲೈಂಗಿಕ ದಾಹವೂ ಒಳ್ಳೆಯದಲ್ಲ. ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಅತಿಯಾದ ಲೈಂಗಿಕ ದಾಹದ ಸಮಸ್ಯೆಯಿದೆ ಎಂದರ್ಥ.


ಅಪರಿಚಿತರೇ ಆದರೂ ಯಾರೋ ಆಕರ್ಷಕವಾಗಿರುವವರನ್ನು ನೋಡಿದ ತಕ್ಷಣ ಲೈಂಗಿಕ ಕ್ರಿಯೆ ಮಾಡಬೇಕೆನಿಸುವುದು. ಒರಟಾಗಿ ಮಿಲನ ಕ್ರಿಯೆ ಮಾಡುವುದು, ದೈಹಿಕ ವಾಂಛೆ ತೀರಿಸಿಕೊಳ್ಳಲು ಆಗಾಗ ಹೊಸ ಹೊಸ ಸಂಗಾತಿಯನ್ನು ಹುಡುಕಿಕೊಳ್ಳುವುದು, ಪದೇ ಪದೇ ಲೈಂಗಿಕ ಕಾಮನೆಯ ಆಲೋಚನೆಗಳನ್ನೇ ಮಾಡುತ್ತಿರುವುದು, ರಾತ್ರಿ ನಿದ್ರಾಹೀನತೆಯಾಗುವುದು ಇತ್ಯಾದಿಗಳು ಅತಿಯಾದ ಲೈಂಗಿಕ ದಾಹದ ಲಕ್ಷಣಗಳು.

ಹೀಗಿದ್ದಲ್ಲಿ ತಕ್ಷಣ ಸೂಕ್ತ ಸಮಾಲೋಚಕರನ್ನು ಕಂಡು ನಿಮ್ಮ ಮನಸ್ಸಿನ ಬೇಗುದಿಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು. ಇಲ್ಲವೇ ಬೇರೆ ಹವ್ಯಾಸಗಳಲ್ಲಿ ಮನಸ್ಸು ಕೇಂದ್ರೀಕರಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ