ಬೆಕ್ಕು ಜತೆಗಿದ್ದರೆ ಮಾನಸಿಕ ಆರೋಗ್ಯ ಹದಗೆಡದು!

ಗುರುವಾರ, 23 ಫೆಬ್ರವರಿ 2017 (10:50 IST)
ಬೆಂಗಳೂರು: ಮಾನಸಿಕ ಆರೋಗ್ಯ ಹದಗೆಟ್ಟಿದೆಯೇ? ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಮನೆಗೊಂದು ಬೆಕ್ಕು ತಂದು ಸಾಕಿ.

 
ಬೆಕ್ಕು ಸಾಕುವವರಿಗೆ, ಅದರಲ್ಲೂ ಗರ್ಭಿಣಿಯಾಗಿದ್ದಾಗ ಅಥವಾ ಬಾಲ್ಯದಲ್ಲಿ ಬೆಕ್ಕು ಜತೆಗಿದ್ದರೆ ಮಾನಸಿಕ ಆರೋಗ್ಯ ಹದಗೆಡುವ ಸಂಭವವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಏಕಾಂಗಿಯಾಗಿ ಜೀವನ ಮಾಡುವವರಿಗೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಬೆಕ್ಕಿನಂತ ಮುದ್ದಾದ ಸಾಕು ಪ್ರಾಣಿಯನ್ನು ಇಟ್ಟುಕೊಂಡವರಿಗೆ ಈ ಸಮಸ್ಯೆಯಿಲ್ಲ.

ಇದರಿಂದಾಗಿ ತಮ್ಮ ಮಕ್ಕಳು ಸದಾ ಬೆಕ್ಕಿನೊಂದಿಗೆ ಆಟವಾಡುತ್ತಿರುತ್ತಾರಲ್ಲ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಬೆಕ್ಕುಗಳು ನಮ್ಮ ಮನಸ್ಸಿನ ಹತಾಶೆ, ಭಾವನೆಗಳನ್ನು ವ್ಯಕ್ತಪಡಿಸಲು ಬಳಸಬಹುದಾದ ಮೊದಲ ಸಾಧನ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ