ಪಾಸ್ತಾ ತಿನ್ನುವುದರಿಂದ ಬೊಜ್ಜು ಬರುವುದಿಲ್ವಂತೆ..ಇಟಾಲಿಯನ್ ಅಧ್ಯಯನದಿಂದ ಬಹಿರಂಗ

ಬುಧವಾರ, 6 ಜುಲೈ 2016 (11:04 IST)
ಪಾಸ್ತಾ ತಿನ್ನುವ ಅಭ್ಯಾಸ ನಿಮಗಿದೆಯಾ..? ಪಾಸ್ತಾ ತಿನ್ನುವುದರಿಂದ ಬೊಜ್ಜು ಬರುತ್ತದೆ ಎಂದು ತಿಳಿದುಕೊಂಡಿದ್ದೀರಾ. ಪಾಸ್ತಾ ಆರೋಗ್ಯಕ್ಕೆ ಎಷ್ಟು ಸಹಾಯಕಾರಿಯಾಗಬಲ್ಲದ್ದು.  ಪಾಸ್ತಾ ಸೇವಿಸುವ ಅಭ್ಯಾಸ ವಿರುವವರಿಗೆ ಶುಭ ಸುದ್ದಿ... ಪಾಸ್ತಾ ತಿನ್ನುವುದರಿಂದ ಬೊಜ್ಜು ಬರುವುದಿಲ್ಲ ಎಂದು ಹೇಳುತ್ತಿದೆ ಇಟಾಲಿಯನ್ ಐಆರ್‌ಸಿಸಿಎಸ್ ನ್ಯೂರೋಮೆಂಡ್ ಸಂಸ್ಥೆ 

ಆದ್ದರಿಂದ ಇಟಾಲಿಯನ್ ಜನರು ಹೆಚ್ಚು ಪಾಸ್ತಾ ಸೇವನೆ ಮಾಡುತ್ತಿದ್ದಾರೆ. ಜಾರ್ಜ್ ಪೌನಿಸ್ ಪ್ರಕಾರ ದೇಹದ ತೂಕ ಇಳಿಸಲು ಮೆಡಿಟರೇನಿಯನ್ ಆಹಾರ ಪಾಸ್ತಾ ಹೆಚ್ಚು ಉಪಯೋಗಕಾರಿ, ಬೊಜ್ಜು ಬರುತ್ತದೆ ಎಂಬ ಕಾರಣಕ್ಕೆ ಹಲವರು ಪಾಸ್ತಾ ತಿನ್ನುವುದನ್ನು ಬಿಟ್ಟಿದ್ದರು. 
 
ಇದಕ್ಕಾಗಿ 23 ಸಾವಿರ ಜನರ ಮೇಲೆ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಹೆಚ್ಚಿನವರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು ಅಲ್ಲದೇ ಅವರ ಹೊಟ್ಟೆಯ ಭಾಗದಲ್ಲಿ ಯಾವುದೇ ಬೊಜ್ಜು ಕಂಡು ಬಂದಿಲ್ಲ ಎನ್ನಲಾಗಿದೆ. ಆದ್ದರಿಂದ ಪಾಸ್ತಾ ತಿದ್ದರೆ ಆರೋಗ್ಯವಾಗಿಡುವಲ್ಲಿ ಸಹಾಯಕಾರಿಯಾಗಬಲ್ಲದ್ದು ಅಲ್ಲದೇ, ಇದರ ಜತೆಗೆ ಬೊಜ್ಜು ನಿವಾರಿಸಬಹುದು ಎಂದು ತಿಳಿದು ಬಂದಿದೆ. 

ಆದ್ರೆ ಬೊಜ್ಜು ಬರುತ್ತದೆ ಎಂಬ ಕಾರಣಕ್ಕೆ ಬೊಜ್ಜು ಬರುವುದಿಲ್ಲ, ಇದೊಂದು ತಪ್ಪು ಗ್ರಹಿಕೆ ಎಂದು ಜಾರ್ಜ್ ಪೌನಿಸ್  ಅವರು ತಿಳಿಸಿದ್ದಾರೆ. ಇನ್ನೂ ಪಾಸ್ತಾ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ