ಥೈರಾಯಿಡ್ ಸಮಸ್ಯೆ ಇರುವವರು : ಹಲಸಿನ ಹಣ್ಣನ್ನು ತಿನ್ನಬಹುದೇ?

ಭಾನುವಾರ, 7 ಜುಲೈ 2019 (08:34 IST)
ಬೆಂಗಳೂರು : ಹಲಸಿನ ಹಣ್ಣು ತುಂಬಾ ರುಚಿಕರವಾದ ಹಣ್ಣು. ನೋಡಿದರೆ ಎಲ್ಲರ ಬಾಯಲ್ಲಿಯೂ ನೀರು ಬರುತ್ತದೆ, ತಿನ್ನಬೇಕು ಎಂಬ ಆಸೆ ಹುಟ್ಟುತ್ತದೆ. ಆದರೆ ಥೈರಾಯಿಡ್ ಸಮಸ್ಯೆ ಇರುವವರು ಈ ಹಣ್ಣು ತಿಂದರೆ ಒಳ್ಳೆಯದೇ ? ಅಥವಾ ಕೆಟ್ಟದೇ ಎಂಬ ಮಾಹಿತಿ ತಿಳಿದಿರುವುದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.




ಥೈರಾಯಿಡ್ ಸಮಸ್ಯೆಗೆ ರಾಮಬಾಣ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ ಅಷ್ಟೇ ಅಲ್ಲದೆ ತಾಮ್ರದ ಅಂಶವು ಹೆಚ್ಚಾಗಿದೆ , ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ , ದೇಹವನ್ನು ರೋಗ ಮುಕ್ತವಾಗಿ ಮಾಡಲು ಸಹಾಯ ಮಾಡುತ್ತದೆ , ದೇಹದ ‘ಹೈಪೋ ಥೈರಾಯಿಡ್ ಇಸಂ ‘ ಸಮಸ್ಯೆಯನ್ನು ಪರಿಣಾಮಾಕಾರಿಯಾಗಿ ನಿವಾರಣೆ ಮಾಡುತ್ತದೆ.


ಮೂರರಿಂದ ನಾಲ್ಕು ಹಲಸಿನ ಹಣ್ಣಿನ ತೊಳೆಗಳು ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ಆಂಟಿ ಆಕ್ಸಿಡಂಟ್ಸ್ ಗಳನ್ನೂ ಸರಬರಾಜು ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಆದ್ದರಿಂದ ದಿನಕ್ಕೆ ಒಂದು ತೊಳೆಯಾದರು ಹಲಸಿನ ಹಣ್ಣನ್ನು ತಿನ್ನಿ ಇದು ನಿಮ್ಮ ದೇಹವನ್ನು ಥೈರಾಯಿಡ್ ಸಮಸ್ಯೆಯಿಂದ ರಕ್ಷಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ