ಚಿಕ್ಕ ವಯಸ್ಸಿಗೆ ಮದುವೆಯಾದರೆ ಹೆಣ್ಣಿಗೆ ತೊಂದರೆಯೇ?

ಗುರುವಾರ, 4 ಜುಲೈ 2019 (08:45 IST)
ಬೆಂಗಳೂರು: 18 ವರ್ಷವಾಗುವ ಮೊದಲು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದರೆ ಅದು ಶಿಕ್ಷಾರ್ಹ ಅಪರಾಧ. ಹಾಗಿದ್ದರೂ ಕೆಲವು ಪೋಷಕರು ಬಡತನ, ಅಥವಾ ಇನ್ಯಾವುದೋ ಒತ್ತಡಕ್ಕೆ ತಮ್ಮ ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುತ್ತಾರೆ.


ಇದರಿಂದ ಹೆಣ್ಣು ಮಕ್ಕಳು ತೊಂದರೆ ಅನುಭವಿಸುತ್ತಾರೆ. ಅತೀ ಚಿಕ್ಕ ವಯಸ್ಸಿಗೆ ಮದುವೆಯಾಗುವುದರಿಂದ ಆಕೆಗೆ ಲೈಂಗಿಕ ಜೀವನದ ಬಗ್ಗೆ ಅಜ್ಞಾನವಿರಬಹುದು. ಅಥವಾ ಗಂಡನ ಜತೆ ದೈಹಿಕ ಸಂಪರ್ಕ ಮಾಡಿದಾಗ ಆಕೆಗೆ ಮುಟ್ಟಿನ ಸಮಸ್ಯೆ, ಅಂಡಾಣು ಬಿಡುಗಡೆ ನಿಯಮಿತವಾಗಿ ಆಗದೇ ಇರುವುದು ಇತ್ಯಾದಿ ಹಲವು ಸಮಸ್ಯೆಗಳು ಬರಬಹುದು.

ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನಲ್ಲಿ ಹೆರಿಗೆಯಾದರೆ ಆಕೆಯ ಗರ್ಭಕೋಶಕ್ಕೆ ಅಪಾಯವಾಗಬಹುದು. ಆಕೆಯ ಗರ್ಭಕೋಶ ಒಂದು ಮಗುವನ್ನು ಹೆರುವಷ್ಟು ಸಾಮರ್ಥ್ಯ ಹೊಂದಿರದೇ ಇರಬಹುದು. ಇದರಿಂದ ಹೆಣ್ಣು ಮಕ್ಕಳು ನಾನಾ ರೀತಿಯ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಹೀಗಾಗಿ ಕನಿಷ್ಟ 20 ವರ್ಷ ದಾಟಿದ ಮೇಲೆಯೇ ಹೆಣ್ಣಿಗೆ ಮದುವೆಯ ಬಂಧನಕ್ಕೊಳಪಡಿಸಿದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ