ಬೆಂಗಳೂರು : ಎಲ್ಲರ ಮನೆಯಲ್ಲಿಯೂ ತುಳಸಿ ಗಿಡವನ್ನು ಬೆಳೆಸುತ್ತಾರೆ. ಆದರೆ ಕೆಲವು ಕಡೆ ಇದು ಚೆನ್ನಾಗಿ ಬೆಳೆಯುವುದಿಲ್ಲ. ಅಂತವರು ತುಳಸಿಗಿಡ ದಟ್ಟವಾಗಿ, ಸೊಂಪಾಗಿ ಬೆಳೆಯುಲು ಇದನ್ನು ಹಾಕಿ.
ತುಳಸಿ ಗಿಡದ ತುದಿಯಲ್ಲಿ ಬೆಳೆಯುವ ಬೀಜದ ಕುಡಿಗಳನ್ನು ಆಗಾಗ ಚಿವುಟಿ ತೆಗೆಯುತ್ತಿರಬೇಕು. ಇಲ್ಲವಾದರೆ ತುಳಸಿ ಗಿಡ ಚೆನ್ನಾಗಿ ಬೆಳೆಯುವುದಿಲ್ಲ. ಹಾಗೇ ತುಳಸಿ ಗಿಡಕ್ಕೆ ಹೆಚ್ಚು ನೀರನ್ನು ಹಾಕಬಾರದು. ತುಳಸಿ ಗಿಡದ ಕುಂಡದಲ್ಲಿರುವ ಮಣ್ಣನ್ನು ಆಗಾಗ ಅಗೆದು ಸಡಿಲಗೊಳಿಸುತ್ತಿರಬೇಕು.
ಹಾಗೇ ತುಳಸಿ ಗಿಡಕ್ಕೆ 1 ಚಮಚ ಎಪ್ಸಂ ಉಪ್ಪನ್ನು ಹಾಕಿ ಮಣ್ಣಿನಿಂದ ಮುಚ್ಚಬೇಕು. ಹೀಗೆ ಮಾಡಿದರೆ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಅಲ್ಲದೇ ಕೀಟ ಬರದಂತೆ ತಡೆಯಲು ಎಪ್ಸಂ ಉಪ್ಪನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಸ್ಪ್ರೇ ಮಾಡಿ.