ಸಬ್ಬಕ್ಕಿ ಸಂಡಿಗೆ ಮಾಡಿ ನೋಡಿ

ಬುಧವಾರ, 15 ಜುಲೈ 2020 (13:27 IST)
Normal 0 false false false EN-US X-NONE X-NONE

ಬೆಂಗಳೂರು : ಮಳೆಗಾಲದಲ್ಲಿ ಅನ್ನ ಸಾರಿನ ಜೊತೆ ತಿನ್ನಲು ಸಂಡಿಗೆ ಇದ್ದರೆ ಊಟದ ರುಚಿ ಹೆಚ್ಚುತ್ತದೆ. ಅದಕ್ಕಾಗಿ ತಯಾರಿಸಿ ಸಬ್ಬಕ್ಕಿಯ ಸಂಡಿಗೆ.

ಬೇಕಾಗುವ ಸಾಮಾಗ್ರಿಗಳು : ಸಬ್ಬಕ್ಕಿ 1 ಕಪ್, ಜೀರಿಗೆ 1 ಚಮಚ, ಉಪ್ಪು 1 ಚಮಚ.

ಮಾಡುವ ವಿಧಾನ : ಸಬ್ಬಕ್ಕಿಯನ್ನು ರಾತ್ರಿ ನೆನೆಸಿಡಿ. ಬೆಳಿಗ್ಗೆ ಅದಕ್ಕೆ  ½ ಗ್ಲಾಸ್ ನೀರು, ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಅಂಟು ಅಂಟಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಬಳಿಕ ತಣ್ಣಗಾದ ಮೇಲೆ ಒಂದು ಪ್ಲಾಸ್ಟಿಕ್  ಹಾಳೆಯ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಸಂಡಿಗೆ ಹಾಕಿ ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ನಿಮಗೆ ತಿನ್ನಬೇಕೆನಿಸಿದಾಗ ಕಾದ ಎಣ‍್ಣೆಯಲ್ಲಿ ಕರಿಯಿರಿ. ಅನ್ನ ಸಾರಿನ ಜೊತೆ ಸಬ್ಬಕ್ಕಿ ಸಂಡಿಗೆ ಚೆನ್ನಾಗಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ