ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅಕ್ಕಿ ಹಿಟ್ಟು ಮತ್ತು ಗೋದಿ ಹಿಟ್ಟನ್ನು ಹಾಕಿ ಹುರಿಯಿರಿ. ಬಳಿಕ ನೀರು ಮತ್ತು ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಹುರಿದ ಹಿಟ್ಟನ್ನು ಹಾಕಿ ತಿರುಗಿಸಿ. ಅದಕ್ಕೆ ಬೆಲ್ಲದ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾದ ಮೇಲೆ ಒಲೆಯಿಂದ ಕೆಳಗಿಳಿಸಿ ಜಾಯಿ ಕಾಯಿ ಪುಡಿ ಮಿಕ್ಸ್ ಮಾಡಿ ಒಂದು ತುಪ್ಪ ಸವರಿದ ಪಾತ್ರೆಗೆ ಈ ಮಿಶ್ರಣವನ್ನು ಸುರಿಯಿರಿ. ಅದರ ಮೇಲೆ ಗಸೆಗಸೆ ಹಾಕಿ ಕತ್ತರಿಸಿ.