ಮೊಬೈಲ್ ಸ್ಕ್ರೀನ್ ಬಿದ್ದಿರುವ ಗೆರೆಗಳನ್ನುಇದರಿಂದ ಕ್ಲೀನ್ ಮಾಡಿದರೆ ಸ್ಕ್ರೀನ್ ಗಾರ್ಡ್ ಫಳಫಳ ಹೊಳೆಯುತ್ತದೆ

ಶುಕ್ರವಾರ, 7 ಜೂನ್ 2019 (07:53 IST)
ಬೆಂಗಳೂರು : ಎಲ್ಲರ ಕೈಯಲ್ಲೂ ಈಗ ಹೆಚ್ಚಾಗಿ ಕಂಡುಬರುವ ವಸ್ತು ಎಂದರೆ ಅದು ಮೊಬೈಲ್. ಮೊಬೈಲ್ ನ್ನು ಅತಿ ಹೆಚ್ಚಾಗಿ ಬಳಸುವುದರಿಂದ ಅದರ ಸ್ಕ್ರೀನ್ ನಲ್ಲಿ ಗೆರೆಗಳು ಮೂಡುತ್ತದೆ. ಇಂತಹ ಗೆರೆಗಳನ್ನು  ಕ್ಲೀನ್ ಮಾಡಬೇಕೆಂದರೆ ಹೀಗೆ ಮಾಡಿ 



2 ಚಮಚ ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ತರಹ ಮಾಡಿಕೊಂಡು ಒಂದು ಬಟ್ಟೆಯಿಂದ ಅದನ್ನು ತೆಗೆದುಕೊಂಡು ಮೊಬೈಲ್ ಸ್ಕ್ರೀನ್ ಗಾರ್ಡ್ ಮೇಲೆ ವೃತ್ತಾಕಾರದಲ್ಲಿ ಒರೆಸಿದರೆ ಸ್ಕ್ರೀನ್ ಗಾರ್ಡ್ ಫಳಫಳ ಹೊಳೆಯುತ್ತದೆ.

 

ಹಾಗೆ ಹಲ್ಲುಜ್ಜಲು ಬಳಸುವ  ಪೇಸ್ಟ್ ತೆಗೆದುಕೊಂಡು ಮೊಬೈಲ್ ಸ್ಕ್ರೀನ್ ಗಾರ್ಡ್ ನ ಒರೆಸಿದರೆ ಅದು ಕ್ಲೀನ್ ಆಗುತ್ತದೆ. ಹಾಗೇ ಟ್ರಾನ್ಪರೆಂಟ್ ನೈಲ್ ಪಾಲಿಶ್ ನ್ನು ತೆಗೆದುಕೊಂಡು ಸ್ಕ್ರೀನ್ ಗಾರ್ಡ್ ಒರೆಸಿ ನಂತರ ಒಂದು ಬಟ್ಟೆಯಲ್ಲಿ ವೆಜಿಟೇಬಲ್ ಆಯಿಲ್ ತೆಗೆದುಕೊಂಡು ಕ್ಲೀನ್ ಮಾಡಿದರೆ ಸ್ಕ್ರೀನ್ ಗಾರ್ಡ್ ಫಳಫಳ ಹೊಳೆಯುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ