ವಿವಾಹದ ಬಳಿಕ ದಂಪತಿಗಳಿಬ್ಬರು ತಮ್ಮ ಮೊಬೈಲ್ ಪಾಸ್ವರ್ಡ್ ಗಳನ್ನು ಹಂಚಿಕೊಳ್ಳಬೇಕೆ?

ಮಂಗಳವಾರ, 4 ಜೂನ್ 2019 (07:20 IST)
ಬೆಂಗಳೂರು : ಮದುವೆಯಾದ ಬಳಕಿ ಸಂಗಾತಿಗಳಿಬ್ಬರು ತಮಗೆ ಸಂಬಂಧಪಟ್ಟ ಯಾವುದೇ ವಿಚಾರವನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಹೀಗೆ ಮಾಡದಿದ್ದರೆ ಮುಂದೆ ಅವರಿಬ್ಬರ ನಡುವೆ ಮನಸ್ತಾಪ ಮೂಡಲು ಅದು ಕಾರಣವಾಗಬಹುದು ಎನ್ನುತ್ತಾರೆ. ಹಾಗಾದ್ರೆ ವಿವಾಹದ ಬಳಿಕ ದಂಪತಿಗಳಿಬ್ಬರು ಪರಸ್ಪರ ತಮ್ಮ ಮೊಬೈಲ್ ಪಾಸ್ವರ್ಡ್ ಗಳನ್ನು ಹಂಚಿಕೊಳ್ಳಬೇಕೆ?




ವೈವಾಹಿಕ ಸಂಬಂಧ ತಜ್ಞರ ಪ್ರಕಾರ ಈ ಪ್ರಶ್ನೆಗೆ ನೇರವಾಗಿ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ದಾಂಪತ್ಯ ಎಂದಾಕ್ಷಣ ಇದರಲ್ಲಿ ಅನ್ಯೋನ್ಯತೆ, ವಿಶ್ವಾಸ, ನಂಬಿಕೆಗಳೇ ಇವುಗಳ ಜೀವಾಳವಾಗಿದ್ದು ಪ್ರಾಮಾಣಿಕತೆಯೇ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.


ಸಾಮಾನ್ಯವಾಗಿ ಕೆಲವರು ಮೊಬೈಲ್ ಪಾಸ್ವರ್ಡ್ ಗಳನ್ನು ಕೇಳುವುದಿಲ್ಲ. ಒಂದು ವೇಳೆ ಅವರು ಕೇಳಿದ್ದೇಯಾದರೆ ಅವರಿಗೆ ನಿಮ್ಮ ಮೇಲೆ ಅನುಮಾನ ಬಂದಿದ್ದು, ಆಗ ದಾಂಪತ್ಯದ ಮೂಲ ಅಡಿಪಾಯವೇ ಪ್ರಶ್ನಾರ್ಹವಾಗುತ್ತವೆ. ಆಗ ತಮ್ಮ ಮೊಬೈಲ್ ಪಾಸ್ವರ್ಡ್ ನ್ನು ಬದಲಿಸಿ ತಮ್ಮ ಸಂಗಾತಿ ಇದನ್ನು ನೋಡದಿರುವಂತೆ ಮಾಡಿದರೆ ತಕ್ಷಣ ಅನುಮಾನದ ಪ್ರಶ್ನೆಗಳು ಇನ್ನಷ್ಟು ಉದ್ಭವವಾಗುತ್ತವೆ. ಅದರಲ್ಲೂ ಮೊಬೈಲ್ ಪಾಸ್ವರ್ಡ್ ನೀಡಿ ಕೆಲವು ಆಪ್ ಗಳನ್ನು ಮಾತ್ರವೇ ಪಾಸ್ವರ್ಡ್ ನಿಂದ ರಕ್ಷಿಸಿದ್ದರೆ ಇದು ಸಂಗಾತಿಯಲ್ಲಿ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಬಹುದು.


ಒಂದು ವೇಳೆ ದಾಂಪತ್ಯದಲ್ಲಿ ಯಾವುದೇ ಅನುಮಾನ ಎದುರಾಗಿ ಇದನ್ನು ಖಚಿತಪಡಿಸಲು ಮೊಬೈಲ್ ಪಾಸ್ವರ್ಡ್ ಬೇಕೇ ಬೇಕು ಎನ್ನುವ ಪರಿಸ್ಥಿತಿ ಎದುರಾದರೆ ಮಾತ್ರ ನೇರವಾಗಿ ಮಾತನಾಡುವುದೇ ಸರಿಯಾದ ಕ್ರಮವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ