ಡೆಲಿವರಿ ನಂತರ ಗರ್ಭನಿರೋಧಕ ಬಳಸಬೇಕೇ?

ಬುಧವಾರ, 24 ಜುಲೈ 2019 (08:20 IST)
ಬೆಂಗಳೂರು: ಡೆಲಿವರಿ ಆದ ಮೇಲೆ ಗರ್ಭನಿರೋಧಕ ಬಳಸಬೇಕೇ? ಯಾವಾಗಿನಿಂದ ಬಳಸಬೇಕು ಎನ್ನುವ ಅನುಮಾನ ಅನೇಕ ಪತಿ-ಪತ್ನಿಯರಿಗೆ ಬರುತ್ತದೆ.


ನಾರ್ಮಲ್ ಡೆಲಿವರಿ ಆಗಿ ಯಾವುದೇ ಸಮಸ್ಯೆ ಇಲ್ಲದೇ ಹೋದರೆ ಎರಡು ತಿಂಗಳ ಬಳಿಕ ಸೇರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಡೆಲಿವರಿ ಆದ ಮೇಲೆ ಮುಟ್ಟು ಬರುವುದು ಕೆಲವು ಸಮಯ ಹಿಡಿಯಬಹುದು. ಆದರೆ ಈ ಸಂದರ್ಭದಲ್ಲಿ ಗರ್ಭನಿರೋಧಕ ಬಳಸದೇ ಮಿಲನ ಕ್ರಿಯೆ ನಡೆಸುವುದರಿಂದ ಮತ್ತೆ ಗರ್ಭಿಯಾಗಲ್ಲ ಎಂಬ ತಪ್ಪು ಕಲ್ಪನೆ ಬೇಡ. ಕೆಲವೊಂದು ಪ್ರಕರಣಗಳಲ್ಲಿ ಮುಟ್ಟು ಬರದೇ ಇದ್ದರೂ ಗರ್ಭಿಣಿಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಗರ್ಭನಿರೋಧಕ ಬಳಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ