ತಂಬಾಕು ಸೇವನೆಯ ಅಡ್ಡ ಪರಿಣಾಮಗಳು ನೀವು ತಿಳಿದುಕೊಳ್ಳಲೇಬೇಕು

ಶುಕ್ರವಾರ, 28 ಏಪ್ರಿಲ್ 2017 (07:52 IST)
ಬೆಂಗಳೂರು: ತಂಬಾಕು ಸೇವನೆ ಒಂದು ಕೆಟ್ಟ ಅಭ್ಯಾಸ. ಇದು ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂದು ನೋಡಿಕೊಳ್ಳಿ.

 
ತಂಬಾಕು ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಅಲ್ಲದೆ ಇದರಿಂದ ಅಸ್ತಮಾ, ಕೆಮ್ಮುವಿನಂತಹ ಉಸಿರಾಟ ಸಂಬಂಧಿ ಖಾಯಿಲೆಗಳು ಬರಬಹುದು. ಧೂಮಪಾನ ಮಾಡುವುದರಿಂದ ಆರ್ಥರೈಟಿಸ್ ಸಮಸ್ಯೆ ಹೆಚ್ಚಬಹುದು.

ಇತ್ತೀಚೆಗಿನ ಅಧ್ಯಯನದ ಪ್ರಕಾರ, ತಂಬಾಕು ಸೇವನೆಯಿಂದ ಎಲುಬು ಸವೆತ ಉಂಟಾಗುತ್ತದೆ ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ತಂಬಾಕು ಹೃದಯ ಮತ್ತು ರಕ್ತ ನಾಳಗಳಿಗೂ ಒಳ್ಳೆಯದಲ್ಲ. ಅದರಿಂದ ಹೃದಯ ಖಾಯಿಲೆ ಬರುವ ಸಂಭವ ಹೆಚ್ಚು.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ರಕ್ತ ಸ್ರಾವ ಮುಂತಾದ ಮರಣಾಂತಿಕ ರೋಗಕ್ಕೆ ಕಾರಣವಾಗಬಹುದು. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಮಹಿಳೆಯರು ಧೂಮಪಾನ ಮಾಡುವುದರಿಂದ ಮುಖದಲ್ಲಿ ಕೂದಲು ಬೆಳವಣಿಗೆ ಹೆಚ್ಚುವ ಅಪಾಯವಿದಯಂತೆ! ಇದಲ್ಲದೆ, ಕ್ಯಾನ್ಸರ್ ಕಾರಕ ಮತ್ತು ಶ್ವಾಸಕೋಶ ಪಿತ್ತಜನಕಾಂಗ ಮುಂತಾದ ಸಮಸ್ಯೆ ಬರುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಬಿ ಕೇರ್ ಫುಲ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ