ಕೊಬ್ಬು ಕರಗಿಸಲು ಇಲ್ಲಿಗೆ ಕೆಲವು ಸಿಂಪಲ್ ಟಿಪ್ಸ್

ಭಾನುವಾರ, 9 ಜುಲೈ 2017 (08:57 IST)
ಬೆಂಗಳೂರು: ಅಧಿಕ ಕೊಬ್ಬಿನಂಶ ನಮಗೆ ಹಲವು ಅಪಾಯ ತಂದಿಡಬಹುದು. ಅದರಲ್ಲೂ ಮುಖ್ಯವಾಗಿ ಹೃದಯದ ಸಮಸ್ಯೆ. ಹೃದಯಾಘಾತದಂತಹ ಸಮಸ್ಯೆ ದೂರ ಮಾಡಲು ಕೊಬ್ಬು ಕರಗಿಸಲೇ ಬೇಕು. ಅದಕ್ಕಿ ಇಲ್ಲಿದೆ ಕೆಲವು ಸರಳ ಪರಿಹಾರ.

 
ಕೊಬ್ಬಿನಂಶವಿರುವ ಆಹಾರ ದೂರ ಮಾಡಿ
ಸೇವಿಸುವ ಆಹಾರದಲ್ಲಿ ಅಧಿಕ ಜಿಡ್ಡು, ಕೊಬ್ಬಿನಂಶ ಇರದಂತೆ ನೋಡಿಕೊಳ್ಳಿ. ಒಮೆಗಾ ಫ್ಯಾಟಿ 3 ಆಸಿಡ್ ಅಂಶ ಬಿಟ್ಟು ಉಳಿದೆಲ್ಲಾ ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ದೈಹಿಕ ಕಸರತ್ತು
ಕೊಬ್ಬು ಕರಗಿಸಲು ಉತ್ತಮ ಉಪಾಯವೆಂದರೆ ದೈಹಿಕ ವ್ಯಾಯಾಮ ಮಾಡುವುದು. ಪ್ರತಿನಿತ್ಯ ವಾಕಿಂಗ್, ಜಾಗಿಂಗ್ ಮಾಡುತ್ತಾ ದೇಹ ದಂಡಿಸುತ್ತಿದ್ದರೆ, ಕೊಬ್ಬಿನಂಶ ಕರಗಿಸಬಹುದು.

ನಾರಿನಂಶದ ಆಹಾರ
ನಾರಿನಂಶವಿರುವ ಹಣ್ಣು ಹಂಪಲುಗಳು, ತರಕಾರಿಗಳನ್ನು ಆದಷ್ಟು ಸೇವಿಸಿ. ಕಿತ್ತಳೆ, ಆಪಲ್, ಬಟಾಣಿ ಕಾಳಿನಂತಹ ಆಹಾರ ಸೇವಿಸಿ. ನಾರಿನಂಶ ಹೆಚ್ಚು ಸೇವಿಸುವುದರಿಂದ ಕೊಬ್ಬಿನಂಶ ಕಡಿಮೆಯಾಗುತ್ತದೆ.

ಧೂಮಪಾನ, ಮದ್ಯಪಾನ
ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರುವುದರಿಂದ ಹೃದಯದ ಆರೋಗ್ಯ, ರಕ್ತದೊತ್ತಡ ಸಹಜವಾಗಿರುತ್ತದೆ. ಹೀಗಾಗಿ ಇವೆರಡನ್ನೂ ದೂರ ಮಾಡಿ.

ಇದನ್ನೂ ಓದಿ.. ಸಚಿವ ರಮಾನಾಥ್ ರೈ ವಿರುದ್ಧ ಗಂಭೀರ ಆರೋಪ ಮಾಡಿದ ಡಿವಿ ಸದಾನಂದ ಗೌಡ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ