ನಿದ್ದೆ ನಮ್ಮ ಬದುಕಿನಲ್ಲಿ ಹಸಿವಿನಷ್ಟೇ ಪ್ರಾಮುಖ್ಯತೆಯನ್ನು ಗಳಿಸಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಿದ್ರೆ ಸುಖ ನಿಧಾನವಾಗಿ ನಮ್ಮಿಂದ ಕಳಚಿಕೊಳ್ಳುತ್ತಿದೆ. ಜೀವನಶೈಲಿ, ಗಡಿಬಿಡಿಯ ಬದುಕು, ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸ ಹೊಂದದೆ ಇರುವುದು ಇಂತಹ ಅನೇಕ ಸಂಗತಿಗಳು ಅನಿದ್ರೆ ಕಾರಣವಾಗುತ್ತೆ.
ಅನಿದ್ರೆಗೆ ಇನ್ನು ಅನೇಕ ಸಂಗತಿಗಳು ಕಾರಣವಾಗುತ್ತಿವೆ..
ನೀವು ಸೇವಿಸುವ ಆಹಾರ ದಿನದ ಕೊನೆಯಲ್ಲಿ ನಿಮ್ಮ ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅನೇಕ ಪ್ರಯೋಗಗಳಿಂದ ತಿಳಿದು ಬಂದಿದೆ. ನಿಮಗೆ ರಾತ್ರಿ ಆದ ಬಳಿಕ ಊಟ ಮಾಡುವ ಅಭ್ಯಾಸ ಇದ್ದರೆ ಅಡ್ಡಿಯಿಲ್ಲ, ಆದರೆ ರಾತ್ರಿ ಸರಳ ಊಟದ ಜೊತೆ ವಿಶೇಷವಾದ ಸಿಹಿತಿನಿಸು ಸೇವಿಸುವುದು ಎಳ್ಳಷ್ಟು ಒಳ್ಳೆಯದಲ್ಲ ನಿದ್ರೆ ಮಾಡುವ ದೃಷ್ಟಿಯಿಂದ. ನೀವು ಮಲಗುವ ಮುನ್ನ ನಿಮ್ಮ ಬಾಯಲ್ಲಿ ಮಿಂಟ್, ಇಲ್ಲವೇ ಸ್ಟ್ರಾಬೆರ್ರಿ ಯಂತಹ ಸುವಾಸನೆ ಇರುವ ಹಿರಿ. ಇದು ಮೆದುಳನ್ನು ಉತ್ತೆಜನಗೊಳಿಸಿ ನಿದ್ರೆಗೆ ದಾರಿ ಮಾಡಿಕೊಡುತ್ತದೆ .