ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್

ಸೋಮವಾರ, 4 ಸೆಪ್ಟಂಬರ್ 2023 (12:34 IST)
ನವದೆಹಲಿ : ಚಂದ್ರನ ಮೇಲ್ಮೈಯನ್ನು ಯಶಸ್ವಿಯಾಗಿ ಮುಟ್ಟಿದ ದಿನಗಳ ನಂತರ ಚಂದ್ರಯಾನ-3ರ ಪ್ರಗ್ಯಾನ್ ರೋವರ್ 100 ಮೀಟರ್ಗಳಷ್ಟು ಕ್ರಮಿಸಿದೆ.

ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಈಗ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರನ್ನು ಸ್ಲೀಪ್ ಮೋಡ್ಗೆ ಹೊಂದಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ. ಸ್ಲೀಪ್ ಮೋಡ್ಗೆ ಹೊಂದಿಸಲಾಗಿದೆ. ಂPಘಿS ಮತ್ತು ಐIಃS ಪೇಲೋಡ್ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಪ್ರಸ್ತುತ, ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೌರ ಫಲಕವು ಸೆಪ್ಟೆಂಬರ್ 22, 2023 ರಂದು ನಿರೀಕ್ಷಿತ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಆಧಾರಿತವಾಗಿದೆ. ರಿಸೀವರ್ ಅನ್ನು ಇರಿಸಲಾಗಿದೆ. ಅದು ಯಶಸ್ವಿಯಾಗಿ ಮತ್ತೊಂದು ಕಾರ್ಯಯೋಜನೆ ಮಾಡುವ ಆಶಯ ಹೊಂದಲಾಗಿದೆ. ಇಲ್ಲದಿದ್ದರೆ, ಅದು ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ತಿಳಿಸಿದೆ.

ರಾತ್ರಿಯಾದಾಗ ಚಂದ್ರನ ಮೇಲ್ಮೈನಲ್ಲಿ – 230 ಡಿಗ್ರಿ ತಾಪಮಾನ ಇರುತ್ತದೆ. ಈ ಸಂದರ್ಭದಲ್ಲಿ ಸಂಶೋಧನೆ ಅಸಾಧ್ಯ. ಹೀಗಾಗಿ ರೋವರನ್ನು ಇಸ್ರೋ ಸುರಕ್ಷಿತವಾಗಿ ನಿಲುಗಡೆ ಮಾಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ