ಲವ್ ಲೈಫ್ ಚೆನ್ನಾಗಿರಬೇಕೆಂದರೆ ಈ ಟಿಪ್ಸ್ ಪಾಲಿಸಿ!

ಸೋಮವಾರ, 5 ಜೂನ್ 2017 (10:34 IST)
ಬೆಂಗಳೂರು: ಯೌವನದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲು. ಹೆಚ್ಚು ಪ್ರಬುದ್ಧತೆಯೂ ಇಲ್ಲದ, ತೀರಾ ಬಾಲಿಶವೂ ಅಲ್ಲದ ಆ ವಯಸ್ಸಿನಲ್ಲಿ ನಿಮ್ಮ ಲವ್ ಲೈಫ್ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು? ಇಲ್ಲದೆ ಟಿಪ್ಸ್!

 
ನಂಬಿಕೆ ಮತ್ತು ಕ್ಷಮೆ
ಸಣ್ಣ ಪುಟ್ಟದ್ದಕ್ಕೆಲ್ಲಾ ಪ್ರಿಯತಮೆ/ಮ ನ ಮೇಲೆ ಸಂಶಯಪಡಬೇಡಿ. ಯಾವುದೇ ಸಂಬಂಧದಲ್ಲಾದರೂ, ನಂಬಿಕೆ ಮುಖ್ಯ. ಹಾಗೇ ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ. ಕ್ಷಮಿಸುವ ಸಹನಾಶೀಲರು ನೀವಾದರೆ ಸಂಬಂಧವೂ ಗಟ್ಟಿಯಾಗಿರುತ್ತದೆ.

ಕಷ್ಟ ಬಂದರೂ ಜತೆಗಿರಿ
ಎಂತಹಾ ಕಷ್ಟವೇ ಬರಲಿ, ಜತೆಗಿರಿ. ಸಂಗಾತಿಯ ಕೈ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನಿನ್ನೊಂದಿಗೆ ನಾನಿದ್ದೇನೆ ಎಂದು ಹೇಳುವ ಪ್ರಾಮಾಣಿಕ ಮಾತೊಂದು ಸಾಕು. ಸವಾಲುಗಳಿಗೆ ಹೆದರುವುದೇ ಬೇಕಾಗಿಲ್ಲ.

ಸ್ವಾತಂತ್ರ್ಯವಿರಲಿ
ನೀವು ಪ್ರೀತಿಸಿದ ವ್ಯಕ್ತಿ ಎಂದ ಮಾತ್ರಕ್ಕೆ ಅವರು ನಿಮ್ಮ ಬಳಿಯೇ ಸುತ್ತಾಡುತ್ತಿರಬೇಕೆಂದೇನಿಲ್ಲ. ಅವರವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವಕಾಶವಿರಲಿ. ಎಲ್ಲವೂ ನನ್ನ ಅಂಕೆಯಲ್ಲೇ ಇರಬೇಕೆಂಬ ಹಠ ಬೇಡ.

ನೀವೂ ನಕ್ಕು, ಸಂಗಾತಿಯನ್ನೂ ನಗಸುತ್ತಿರಿ
ನಗು ಎಂತಹ ಕೋಪ, ಕಷ್ಟಗಳನ್ನೂ ದೂರಮಾಡುವ ಶಕ್ತಿ ಕೊಡುತ್ತದೆ. ಹಾಗಾಗಿ ಆದಷ್ಟು ನೀವೂ ನಗುಮೊಗದಿಂದ ಇದ್ದು, ಸಂಗಾತಿಯ ಮುಖದಲ್ಲೂ ನಗು ಮೂಡಿಸುವ ಯತ್ನ ಮಾಡಿ.

ಪರಸ್ಪರ ದೂಷಣೆ ಬೇಡ
ಸಂಬಂಧವೆಂದ ಮೇಲೆ ತಪ್ಪುಗಳಾಗುವುದು ಸಹಜ. ಅದಕ್ಕೆಲ್ಲಾ ನೀನೇ ಕಾರಣ ಎಂದು ಪರಸ್ಪರ ದೋಷಾರೋಪಣೆ ಮಾಡುತ್ತಾ ಕೂತರೆ ಸಂಬಂಧದಲ್ಲಿ ನಂಬಿಕೆ ಉಳಿಯದು.

ಪ್ರೀತಿಯಿಂದಲೇ ಜಗಳವಾಡಿ
ಪ್ರೀತಿಯಿದ್ದಲ್ಲಿ ಜಗಳ ಸಹಜ ಎನ್ನುತ್ತಾರೆ. ಸಣ್ಣ ಪುಟ್ಟ ಜಗಳಗಳೆಲ್ಲಾ ಒಳ್ಳೆಯದೇ. ಆದರೆ ಯಾವುದೇ ಕಾರಣಕ್ಕೂ ಅದು ಸಂಬಂಧವನ್ನು ಮೀರಿದ ಸಂಭಾಷಣೆಗಳಿಂದ ಕೂಡಿರಬಾರದು. ಕೋಪದ ಭರದಲ್ಲಿ ಸಂಬಂಧ ಮುರಿಯುವಂತಹ ಸಂಭಾಷಣೆಗಳು ಬೇಡ. ನೆನಪಿರಲಿ, ಒಮ್ಮೆ ಮುರಿದ ದಾರ ವಾಪಸ್ ಕಟ್ಟಿದರೂ ಗಂಟು ಉಳಿಯುವುದು!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ