ನಿಂಬೆ ಹಣ್ಣು ಕೆಡಬಾರದಂತಿದ್ದರೆ ಈ ರೀತಿಯಲ್ಲಿ ಸ್ಟೋರ್ ಮಾಡಿ
ಶನಿವಾರ, 19 ಸೆಪ್ಟಂಬರ್ 2020 (07:28 IST)
ಬೆಂಗಳೂರು : ನಿಂಬೆ ಹಣ್ಣನ್ನು ಹೆಚ್ಚು ದಿನಗಳ ಕಾಲ ಬಳಸಲು ಆಗುವುದಿಲ್ಲ. ಅದು ಬೇಗನೆ ಹಾಳಾಗುತ್ತದೆ. ಆದರೆ ಅದನ್ನು ಈ ರೀತಿ ಸ್ಟೋರ್ ಮಾಡಿ ಇಟ್ಟರೆ ನಿಂಬೆ ಹಣ್ಣನ್ನು ಹೆಚ್ಚು ದಿನಗಳ ಕಾಲ ಬಳಸಬಹುದು.
ನಿಂಬೆ ಹಣ್ಣಿಗೆ ಸ್ವಲ್ಪ ಎಣ್ಣೆಯನ್ನು ಸವರಿ ಗಾಳಿಯಾಡದ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟುಕೊಂಡರೆ ಬೇಗ ಕೆಡುವುದಿಲ್ಲ. ಹಾಗೇ ಗಾಳಿಯಾಡದ ಡಬ್ಬದಲ್ಲಿ ನಿಂಬೆ ಹಣ್ಣನ್ನು ಹಾಕಿ ನಿಂಬೆ ಹಣ್ಣು ಮುಳುಗುವವರೆಗೂ ನೀರನ್ನು ಹಾಕಿ ಅದಕ್ಕೆ ½ ಕಪ್ ವಿನೆಗರ್ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿಡಿ.