ದೇಹದ ಸೌಂದರ್ಯಕ್ಕೆ ಸರಳವಾದ ಮನೆಮದ್ದು

ಅತಿಥಾ

ಬುಧವಾರ, 13 ಡಿಸೆಂಬರ್ 2017 (16:38 IST)
ದೇಹದ ಸೌಂದರ್ಯಕ್ಕೆ ಸರಿಯಾದ ಪ್ರಮಾಣದ ಪೋಷಕಾಂಶಗಳು ಅಗತ್ಯವಾಗಿರುತ್ತದೆ, ಅವುಗಳಲ್ಲಿ ಸ್ವಲ್ಪ ಏರು ಪೇರಾದರೂ ನಮ್ಮ ದೇಹದ ಸೌಂದರ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.

ಇತ್ತೀಚಿಗೆ ವಿಟಮಿನ್ ಇ ಕೊರತೆಯಿಂದ ತುಂಬಾ ಸಮಸ್ಯೆಗಳು ಕಂಡುಬರುತ್ತಿದ್ದು ವಿಟಮಿನ್ ಇ ಕೊರತೆಯನ್ನು ಹೇಗೆ ತಡೆಗಟ್ಟಬಹುದು ಮತ್ತು ಸೌಂದರ್ಯ ವರ್ಧಕವಾಗಿ ವಿಟಮಿನ್ ಇ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
 
ಹೌದು ವಿಟಮಿನ್ ಇ, ನಮಗೆ ತರಕಾರಿ ಎಣ್ಣೆಗಳು, ಧಾನ್ಯಗಳು, ಮಾಂಸ, ಮೊಟ್ಟೆ, ಹಣ್ಣುಗಳು, ತರಕಾರಿಗಳು ಮತ್ತು ಗೋಧಿ ಸೇರಿದಂತೆ ಹಲವು ಆಹಾರಗಳ ಮೂಲಕ ನಮಗೆ ಲಭ್ಯವಾಗುತ್ತದೆ. ಇದು ಕೇವಲ ಕೊಲೆಸ್ಟ್ರಾಲ್ ನಿಯಂತ್ರಣ, ಹಾರ್ಮೋನ್ ಸಮತೋಲನ, ಆಲ್ಝೈಮರ್, ಕಣ್ಣಿನ ಪೊರೆಗಳು, ಆಸ್ತಮಾ, ಉಸಿರಾಟದ ಸೋಂಕುಗಳನ್ನು ತಡೆಗಟ್ಟುವ ಜೊತೆಗೆ ಸೌಂದರ್ಯ ಹೆಚ್ಚಿಸಲು ಕೂಡ ಅಷ್ಟೆ ಉಪಯುಕ್ತವಾಗಿದೆ. ಅಲ್ಲದೇ ಇದು ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಔಷಧಿ ಅಂಗಡಿಗಳಲ್ಲಿಯೂ ಸಹ ಲಭ್ಯವಾಗಿರುತ್ತದೆ.
 
ಕೆಲವು ಆಸಕ್ತಿದಾಯಕ ಸೌಂದರ್ಯ ಸಲಹೆಗಳನ್ನು ಇಲ್ಲಿ ನೋಡೋಣ-
 
1. ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಹಾನಿಯಾಗಿರುವ ಪ್ರದೇಶದ ಮೇಲೆ ನಿಧಾನವಾಗಿ ಲೇಪಿಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ಹಾನಿಗೊಂಡಿರುವ ಚರ್ಮವನ್ನು ಇದು ಸರಿಪಡಿಸುತ್ತದೆ.
 
2. ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ಆಲಿವ್ ಎಣ್ಣೆಯ ಜೊತೆಗೆ ಮಿಶ್ರಣ ಮಾಡಿ ಹಾನಿಯಾಗಿರುವ ಪ್ರದೇಶದ ಮೇಲೆ ಲೇಪಿಸುವುದರಿಂದ ಕಪ್ಪಾಗಿರುವ ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ.
 
3. ವಿಟಮಿನ್ ಇ ಎಣ್ಣೆಯ ಜೊತೆಗೆ ಬೆಚ್ಚಗಿನ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲು ಮತ್ತು ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
 
4. ವಿಟಮಿನ್ ಇ ಎಣ್ಣೆಯನ್ನು ಮಲಗುವ ಮುನ್ನ ತುಟಿಗೆ ಲೇಪಿಸುವುದರಿಂದ ತುಟಿಯ ಬಣ್ಣವನ್ನು ತಿಳಿಯಾಗಿಸುತ್ತದೆ.
 
5. ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ಉಂಗುರ ಬೆರಳಿನ ಸಹಾಯದಿಂದ ಮಸಾಜ ಮಾಡುವುದರಿಂದ ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲವನ್ನು ಕಡಿಮೆಯಾಗಿಸುತ್ತದೆ.
 
6. ವಿಟಮಿನ್ ಇ ಎಣ್ಣೆಯ ಜೊತೆಗೆ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಕೈಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಒರಟಾಗಿರುವ ಕೈಗಳನ್ನು ಮೃದುವಾಗಿಸುತ್ತದೆ.
 
ಇದರಿಂದ ವಿಟಮಿನ್ ಇ ಸೌಂದರ್ಯವರ್ಧಕವಾಗಿ ತುಂಬಾ ಉಪಯುಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ