ಎಲೆಕೋಸಿನಿಂದ ಮ್ಯಾಜಿಕ್ ಎನಿಸುವ ಬದಲಾವಣೆ!

ಮಂಗಳವಾರ, 9 ನವೆಂಬರ್ 2021 (11:53 IST)
ನಿಯಮಿತವಾಗಿ ಎಲೆಕೋಸನ್ನು ಆಹಾರದಲ್ಲಿ ಸೇರಿಸಿಕೊಂಡರೆ ಆರೋಗ್ಯವು ಬಹುಬೇಗ ಸುಧಾರಿಸುವುದು.
ಕಡಿಮೆ ಕ್ಯಾಲೋರಿ ಮತ್ತು ಪ್ರಮುಖ ಪೋಷಕಾಂಶಗಳಿಂದ ಕೂಡಿರುವ ಎಲೆಕೋಸು ಚಯಾಪಚಯ ಕ್ರಿಯೆಯನ್ನು ಸುಧಾರಿಸಿ, ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.
ಎಲೆ ಕೋಸು ಕಡಿಮೆ ಪ್ರಮಾಣದ ಕ್ಯಾಲೋರಿ, ಪ್ರೋಟೀನ್, ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಅನ್ನು ಒಳಗೊಂಡಿರುತ್ತದೆ. ಇದು ವಿಟಮಿನ್ ಕೆ, ಬಿ6 ಮತ್ತು ಸಿ ಯಂತಹ ಜೀವಸತ್ವಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಜೀರ್ಣ ಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ನರಮಂಡಲದ ಆರೋಗ್ಯವನ್ನು ಸುಧಾರಿಸುವುದು.
ಕೆಲವು ಅಧ್ಯಯನಗಳು ತಿಳಿಸುವ ಪ್ರಕಾರ ಎಲೆಕೋಸಿನಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇದು ಸ್ವತಂತ್ರ ರಾಡಿಕಲ್ಸ್ಗಳನ್ನು ನಿಯಂತ್ರಿಸಿ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ದೇಹದ ತೂಕವನ್ನು ಗಮನಾರ್ಹ ರೀತಿಯಲ್ಲಿ ಇಳಿಸಲು ಸಹಾಯ ಮಾಡುವುದು.
ಜೀರ್ಣ ಕ್ರಿಯೆ
ಈ ತರಕಾರಿಯು ಕರುಳು ಸ್ನೇಹಿ ಹಾಗೂ ಕರಗದ ನಾರಿನಂಶಗಳಿಂದ ಕೂಡಿದೆ. ಕೆಲವು ಸಂಶೋಧನೆ ಹಾಗೂ ಅಧ್ಯಯನಗಳ ಪ್ರಕಾರ ನಾರಿನಂಶ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವುದು. ಜೊತೆಗೆ ಕರುಳಿನ ಚಲನೆಯನ್ನು ಕ್ರಮ ಬದ್ಧಗೊಳಿಸುತ್ತದೆ. ನಿಯಮಿತವಾಗಿ ಕರುಳಿನ ಆರೋಗ್ಯವನ್ನು ವೃದ್ಧಿಸುವುದು.
ತೂಕ ನಿರ್ವಹಣೆ
ಎಲೆಕೋಸು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿದೆ. ಒಂದು ಕಪ್ ಬೇಯಿಸಿದ ಎಲೆ ಕೋಸಿನಲ್ಲಿ ಕೇವಲ 34 ಕ್ಯಲೋರಿ ಪ್ರಮಾಣವನ್ನು ಹೊಂದಿರುತ್ತದೆ. ಇದು ಇದು ತೂಕ ನಿರ್ವಣೆಗೆ ಅಥವಾ ಸಮತೋಲನದಲ್ಲಿ ಇಡಲು ಅತ್ಯುತ್ತಮವಾದ ಆಯ್ಕೆ ಆಗುವುದು. ಇದನ್ನು ಗಣನೀಯವಾಗಿ ಸೇವಿಸುವುದರಿಂದ ಶಕ್ತಿಯ ಮಟ್ಟ ಹೆಚ್ಚುವುದು.
ರಕ್ತದೊತ್ತಡ
ಎಲೆಕೋಸು ಪೊಟ್ಯಾಸಿಯಮ್ ಅನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ರಕ್ತದೊತ್ತಡದ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವುದು. ದೈಹಿಕ ಕಾರ್ಯವನ್ನು ಹೆಚ್ಚಿಸುವ ಪ್ರಮುಖ ಖನಿಜ ಮತ್ತು ಎಲೆಕ್ಟೋಲೈಟ್ ಅನ್ನು ಒಳಗೊಂಡಿದೆ. ಅಧಿಕ ರಕ್ತದೊತ್ತಡವು ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸಬಹುದು.
ಅಧ್ಯಯನಗಳು ಮತ್ತು ಸಂಶೋಧನೆಗಳು ತಿಳಿಸುವ ಪ್ರಕಾರ ಪೊಟ್ಯಾಸಿಯಮ್ ಭರಿತ ಎಲೆಕೋಸು ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಜೊತೆಗೆ ಆರೋಗ್ಯವನ್ನು ಉತ್ತಮಾದ ಸ್ಥಿತಿಯಲ್ಲಿ ಇಡುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ