ಫಿಟ್ ಅಂಡ್ ಹೆಲ್ತಿಯಾಗಿರಲು ಒಣ ಹಣ್ಣುಗಳನ್ನು ಸೇವಿಸಿ

ಸೋಮವಾರ, 8 ನವೆಂಬರ್ 2021 (16:47 IST)
ಡ್ರೈ ಫ್ರೂಟ್ ಗಳು ತಮ್ಮ ಅದ್ಭುತವಾದ ಆರೋಗ್ಯ ಪ್ರಯೋಜನಗಳಿಂದಾಗಿ ಹಿಂದಿನಿಂದಲೂ ಜನಪ್ರಿಯವಾಗಿದೆ.
ಫಿಟ್ ಅಂಡ್ ಹೆಲ್ತಿಯಾಗಿರಲು ಒಣ ಹಣ್ಣುಗಳನ್ನು ಸೇವಿಸಲು ಬಹುತೇಕರು ಶಿಫಾರಸ್ಸು ಮಾಡುತ್ತಾರೆ.
ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಡ್ರೈ ಫ್ರೂಟ್ಗಳನ್ನು ತಿನ್ನಲೇಬೇಕು. ಒಂದೊಂದು ಒಣ ಹಣ್ಣುಗಳು ಒಂದೊಂದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ತಾಜಾ ಹಣ್ಣುಗಳನ್ನು ತಪ್ಪಿಸುವ ಮಕ್ಕಳಿಗೆ ತಪ್ಪದೇ ಡ್ರೈ ಫ್ರೂಟ್ ಗಳನ್ನು ನೀಡಿ.
ಬಾದಾಮಿ
ಬಾದಾಮಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಜನಪ್ರಿಯವಾದ ಡ್ರೈ ಫ್ರೂಟ್ ಆಗಿದೆ. ಮುಖ್ಯವಾಗಿ ಬಾದಾಮಿಯಲ್ಲಿ ವಿಟಮಿನ್ ಇ, ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಇದೆ. ಆರೋಗ್ಯವಾಗಿರಲು ಪ್ರತಿನಿತ್ಯ ನೆನೆಸಿದ ಬಾದಾಮಿಗಳನ್ನು ಸೇವಿಸಿ.
ಪ್ರಯೋಜನಗಳು
•ಬಾದಾಮಿ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
•ಬಾದಾಮಿಯು ನಿಮ್ಮ ತೂಕವನ್ನು ಕಡಿಮೆಯಾಗಿಸಲು ಸಹಾಯ ಮಾಡುತ್ತದೆ.
•ಇದು ಸುಂದರವಾದ ಚರ್ಮ ಮತ್ತು ಕೂದಲನ್ನು ನಿಮ್ಮದಾಗಿಸುತ್ತದೆ.
•ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಪಿಸ್ತಾ
ಪಿಸ್ತಾ ತನ್ನ ಸ್ವಾದಿಷ್ಟವಾದ ರುಚಿಗೆ ಹೆಸರುವಾಸಿಯಾಗಿದೆ. ಪ್ರತಿನಿತ್ಯ ನಿಯಮಿತವಾಗಿ ಪಿಸ್ತಾ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದು ಹೆಚ್ಚು ಕಾಲ ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಒಲಿಕ್ ಆಮ್ಲ, ಕ್ಯಾರೋಟಿನ್ ಗಳು, ವಿಟಮಿನ್ ಇ, ಮ್ಯಾಂಗನೀಸ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.
ಪ್ರಯೋಜನಗಳು
•ಪಿಸ್ತಾದ ಸೇವನೆಯಿಂದ ಮಧುಮೇಹವನ್ನು ತಡೆಯುತ್ತದೆ.
•ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.
•ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
•ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಖರ್ಜೂರ
ಖರ್ಜೂರವು ಯಥೇಚ್ಚವಾದ ಪ್ರೋಟೀನ್, ಫೈಬರ್, ಸೋಡಿಯಂಗಳಿಂದ ತುಂಬಿದೆ. ಮುಖ್ಯವಾಗಿ ಒಣ ಖರ್ಜೂರದಲ್ಲಿ ಜೀರ್ಣಕಾರಿ ನಾರುಗಳು ಅಧಿಕವಾಗಿರುವುದರಿಂದ, ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುತ್ತದೆ. ಅಧಿಕ ಕಬ್ಬಿಣದ ಅಂಶವಿರುವ ಈ ಹಣ್ಣು ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತವೆ. ಮುಖ್ಯವಾಗಿ ಚಳಿಗಾಲದ ಸಮಯದಲ್ಲಿ ಖರ್ಜೂರದ ಸೇವನೆ ಅತ್ಯುತ್ತಮವಾದುದು.
ಪ್ರಯೋಜನಗಳು
•ಖರ್ಜೂರವು ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
•ದೇಹದಲ್ಲಿನ ರಕ್ತದ ಪ್ರಮಾಣ ಅಥವಾ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
•ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಒಣ ಅಂಜೂರ
ಒಣ ಅಂಜೂರ ಬಹುತೇಕರ ಅಚ್ಚು ಮೆಚ್ಚಿನ ಡ್ರೈ ಫ್ರೂಟ್ ಆಗಿದೆ. ಇದೊಂದು ಸಿಹಿಯಾದ ಹಣ್ಣು ಮಾತ್ರವಲ್ಲದೇ, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಗಳಿಂದ ಸಮೃದ್ಧವಾಗಿದೆ.
ಪ್ರಯೋಜನಗಳು
•ಸಂತಾನೋತ್ಪತ್ತಿಗೆ ಉತ್ತಮವಾಗಿದೆ.
•ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.
•ಮೂಳೆಯನ್ನು ಸದೃಢವಾಗಿಸುತ್ತದೆ.
•ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
•ದೇಹದ ತೂಕ ಇಳಿಕೆಗೆ ಪ್ರಯೋಜನಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ