ಯೋಗಾದಲ್ಲಿ ಶುರುವಾಗಿದೆ ಹೊಸ ಟ್ರೆಂಡ್: ನೀವೂ ಮಾಡಿ ನೋಡಿ ’ಮೇಕೆ ಯೋಗಾ’

ಶನಿವಾರ, 27 ಮೇ 2017 (17:40 IST)
ಅರಿಝೋನಾ:ಇತ್ತೀಚಿನ ದಿನಗಳಲ್ಲಿ ಯೋಗಾದಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಅದೇನೆಂದರೆ "ಗೋಟ್ ಯೋಗಾ"(Goat Yoga) ಅಥವಾ "ಮೇಕೆ ಯೋಗಾ". ಅಂದರೆ ಮೇಕೆಗಳ ಜತೆ ಯೋಗಾಸನಗಳನ್ನು ಮಾಡುವುದು. ಇದೇನಿದು ಮೇಕೆಗಳ ಯೋಗಾನಾ ಅಂತಾ ಉದ್ಘರಿಸಬೇಡಿ ಇದು ಸ್ವಲ್ಪ ಅಚ್ಚರಿ ಅನಿಸಿದ್ರೂ ನಿಜ. ಇಂತಹ ಒಂದು ವಿಶಿಷ್ಟವಾದ ಯೋಗಾದ ಬಗ್ಗೆ ಇಲ್ಲಿದೆ ಮಾಹಿತಿ.
 
ಅರಿಝೋನಾದ ಒಂದು ಗ್ರಾಮದಲ್ಲಿ ಇಂತಹ ಒಂದು ವಿಶಿಷ್ಟವಾದ ಗೋಟ್ ಯೋಗಾ ನಡೆಯುತ್ತದೆ. ಇದನ್ನು ಆರಂಭಿಸಿದ್ದು ಲಾನಿ ಮೋರ್ಸ್ ಎಂಬ ಮಹಿಳೆ. ಲಾನಿ ಮೋರ್ಸ್ ಒಂದುದಿನ ತನ್ನ ಫ್ರೆಂಡ್ಸ್ ಗಳಿಗೆ  ಯೋಗಾ ಮ್ಯಾಟ್ ನೊಂದಿಗೆ ತನ್ನ ಫಾರ್ಮ್ ಹೌಸ್ ಗೆ ಬರುವಂತೆ ಆಹ್ವಾನಿಸುತ್ತಾರೆ. ಅವರು ಯೋಗಾ ಮಾಡಲು ಆರಂಭಿಸಿದಂತೆ ಅವರ ಸುತ್ತಮುತ್ತಲು ಮೇಕೆಗಳು, ಆಡುಗಳು ಬಂದು ನಿಂತವು. ಅವಗಳನ್ನು ಹೊರ ಹಾಕಲು ಯತ್ನಿಸಿದರೂ ಅವು ಹೊರಹೋಗದೇ ಅವರ ಬೆನ್ನಿನ ಮೇಲೆ ಹತ್ತಿ ಓಡಾಡಲು ಆರಂಭಿಸಿದವು. ಇದರಿಂದ ಲಾನಿ ಹಾಗೂ ಅವರ ಸ್ನೇಹಿತರಿಗೆ ವಿಶಿಷ್ಟವಾದ ಅನುಭವವಾಯಿತು. ಅಲ್ಲದೇ ಇದನ್ನು ಹೊಸ ತರಹದ ಯೋಗವನ್ನಾಗಿ ರೂಪಿಸಲು ನಿರ್ಧರಿಸಿದರು. ಹೀಗೆ ಗೋಟ್ ಯೋಗಾ ಆರಂಭವಾಯಿತು.
 
ಈಗಲೂ ಕೂದ ಅರಿಝೋನಾದ ಕೆಲವು ಭಾಗಗಳಲ್ಲಿ ಮಾತ್ರ ಈ ಗೋಟ್ ಯೋಗಾ ನಡೆಯುತ್ತದೆ. ಈ ಯೋಗಾದ ಪ್ರವೃತ್ತಿ ಏನೆಂದರೆ ಯೋಗಾ ಮಾಡುವವರು ಕ್ಯಾಟ್ ಪೋಸ್, ಬ್ರಿಡ್ಜ್ ಪೋಸ್ ಗಳನ್ನು ಮಾಡುತ್ತಾರೆ. ಆಗ ಈ ಮೇಕೆಗಳು ನಿಮ್ಮ ಬೆನ್ನಿನ ಮೇಲೆ ಹತ್ತಿ ಓಡಾಡುತ್ತವೆ. ಮೇಕೆಗಳು ತುಂಬಾ ಶಾಂತಸ್ವಭಾವದವುಗಳಾಗಿರುವುದರಿಂದ ನಿಮ್ಮಲ್ಲಿನ ಒತ್ತಡ ನಿವಾರಣೆಯಾಗುತ್ತದೆ. ಮತ್ತು ನೀವು ಖುಷಿಯನ್ನು ನುಭವಿಸುತ್ತೀರಿ ಎಂಬುದು ಗೋಟ್ ಯೋಗಾ ಸಾಧಕರ ಅಭಿಪ್ರಾಯ. ನೀವೂ ಕೂಡ ಟ್ರೈಮಾಡಿ ನೋಡಿ.. ಆದ್ರೆ ಸ್ವಲ್ಪ ಹುಷಾರು..
 

ವೆಬ್ದುನಿಯಾವನ್ನು ಓದಿ