ಹೆಣ್ಣು-ಗಂಡಿನ ಲೈಂಗಿಕಾಸಕ್ತಿ ಕೆರಳುವ ಸಮಯ ಬೇರೆ ಬೇರೆ

ಶನಿವಾರ, 4 ಫೆಬ್ರವರಿ 2017 (21:55 IST)
ಪ್ರತಿಯೊಬ್ಬರ ಜೀವನದಲ್ಲಿ ಲೈಂಗಿಕ ವಿಷಯ ಅತ್ಯಂತ ಪ್ರಮುಖವಾದದ್ದು. ಲೈಂಗಿಕ ಜೀವನದಲ್ಲಿ ಹೆಚ್ಚೂ ಕಡಿಮೆಯಾದರೆ ಅದು ಅವರ ದಾಂಪತ್ಯದ ಮೇಲೆ ಪರಿಣಾಮ ಬೀರುತ್ತೆ. ದಾಂಪತ್ಯದಲ್ಲಿ ಅತ್ಯಂತ ಪ್ರಮುಖವಾದ ಲೈಂಗಿಕಾಸಕ್ತಿ ಪುರುಷ ಮತ್ತು ಮಹಿಳೆಯರಲ್ಲಿ ಯಾವ ಸಂದರ್ಭ ಹೆಚ್ಚಾಗುತ್ತದೆ ಎಂಬುವುದರ ಕುತೂಹಲಕಾರಿ ಅಧ್ಯಯನ ಇಲ್ಲಿದೆ.
 

ಗಂಡಸರಿಗೆ ಬೆಳಗಿನ 7.54ರ ಸಮಯ ಲೈಂಗಿಕ ಕ್ರಿಯೆಗೆ ಅತ್ಯುತ್ತಮ ಸಮಯವಂತೆ. ಪುರುಷರು ಬೆಳಗಿನ ಜಾವ ಹೆಚ್ಚು ಆಸಕ್ತಿ ಹೊಂದಿರುತ್ತಾರಂತೆ. ಮಹಿಳೆಯರಿಗೆ ರಾತ್ರಿ ಸಂದರ್ಭ ಹೆಚ್ಚು ಆಸಕ್ತಿ ಕೆರಳುತ್ತಂತೆ. ರಾತ್ರಿ 11.20ರ ನಂತರ  ಮಹಿಳೆಯರು ಸೆಕ್ಸ್‘ಗೆ ಹೆಚ್ಚು ಹಾತೊರೆಯುತ್ತಾರಂತೆ.

ಹೊಸ ಅಧ್ಯಯನದ ಫಲಿತಾಂಶ ಸೂಚಿಸುವ ಪ್ರಕಾರ, ಗಂಡು-ಹೆಣ್ಣಿನ  ಲೈಂಗಿಕಾಸಕ್ತಿಯ ಕಾಲಮಾನದಲ್ಲಿ 15 ಗಂಟೆ ವ್ಯತ್ಯಯವಿದೆ. ದಿನ ನಿತ್ಯದ ತ್ತಡದ ಬದುಕು, ಸಂಸಾರದ ಹೊಣೆ ಮುಂತಾದುವುಗಳಿಂದ ದಣಿಯುವ ಮಹಿಳೆಯರು ರಾತ್ರಿ 11.24ರಿಂದ ರಾತ್ರಿ 2 ಗಂಟೆ ಸಂದರ್ಭ ಸಂಭೋಗವನ್ನ ಬಯಸುತ್ತಾರಂತೆ. ಪುರುಷರು ಬೆಳಗಿನ ಪಾಹಾರಕ್ಕೂ ಮುನ್ನವೇ ಬಯಸುತ್ತಾರಂತೆ.

ಲೈಂಗಿಕಾಸಕ್ತಿಯ ಸಮಯ ಬೇರೆ ಬೇರೆ ಇರುವುದರಿಂದ ಹೊಂದಾಣಿಕೆ ಸಮಸ್ಯೆ ತಲೆದೋರಿ ಒದ್ದಾಡುತ್ತಿರುತ್ತಾರೆ ಎಂಬುದು ತಜ್ಞರ ಮಾತು.ಈ ವ್ಯತ್ಯಾಸದಿಂದಾಗಿಯೇ ಶೇ. 68ರಷ್ಟು ಮಹಿಳೆಯರು, ಶೇ. 63 ರಷ್ಟು ಪುರುಷರು ಡೇಟಿಂಗ್‘ನಲ್ಲಿ ತೊಡಗಿದ್ದಾರಂತೆ.

ಸೆಕ್ಸ್ ಟಾಯ್ ಉತ್ಪಾದಕ ಕಂಪನಿ ‘ಲವ್ ಹನಿ’ ಸಂಸ್ಥೆ ಸಾವಿರಾರು ಜನರ ಮೇಲೆ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದೆ.

ವೆಬ್ದುನಿಯಾವನ್ನು ಓದಿ