ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

Sampriya

ಶನಿವಾರ, 25 ಜನವರಿ 2025 (17:29 IST)
Photo Courtesy X
ನಾನ್‌ವೆಜ್‌ ತಿನ್ನದವರಿಗೆ ಮಶ್ರೂಮ್‌ನಲ್ಲಿ ಟೇಸ್ಟಿಯಾಗಿ ಕಬಾಬ್ ಮಾಡಿ ಸವಿಯಬಹುದು. ಇದು ಸಂಜೆಯ ಸ್ನ್ಯಾಕ್ಸ್‌ ಆಗಿಯೂ ಅಥವಾ ಪಲಾವ್, ಅನ್ನದ ಜತೆ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು

ಮಶ್ರೂಮ್‌ 1 ಪ್ಯಾಕೇಟ್‌
ಕಬಾಬ್ ಪೌಡರ್
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಉಪ್ಪು
ಕರಿಬೇವು
ಸ್ವಲ್ಪ ಅಕ್ಕಿ ಹಿಟ್ಟು ಇಲ್ಲದಿದ್ದರೆ ಮೈದಾ


ಮಾಡುವ ವಿಧಾನ:

ಕಬಾಬ್ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅಕ್ಕಿ ಹಿಟ್ಟು ಇಲ್ಲದಿದ್ದರೆ ಮೈದಾ, ಕತ್ತರಿಸಿದ ಕರಿಬೇವು ಹಾಕಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ನಂತರ ಇದಕ್ಕೆ ಕಟ್ ಮಾಡಿದ ಮಶ್ರೂಮ್ ಅನ್ನು ಸೇರಿಸಿ. ನಂತರ ಕಾದ ಎಣ್ಣೆಯಲ್ಲಿ ಕಾಯಿಸಿ. ಇದೀಗ ರುಚಿಕರವಾದ ಮಶ್ರೂಮ್ ಕಬಾಬ್ ಸವಿಯಲು ಸಿದ್ಧ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ