ಕಿವಿಯಲ್ಲಾಗುವ ಈ ಬದಲಾವಣೆಗಳು ದೇಹದ ಕಾಯಿಲೆ ಬಗ್ಗೆ ತಿಳಿಸುತ್ತದೆಯಂತೆ!

ಶನಿವಾರ, 27 ಜನವರಿ 2018 (06:38 IST)
ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ಹೇಗಿದೆ ಎಂಬುದು ಹೇಳಬಹುದು.

 
ಅಮೇರಿಕಾದ ಆರೋಗ್ಯ ತಜ್ಞರ ಪ್ರಕಾರ ಕಿವಿಯಲ್ಲಿ ಹೆಚ್ಚು ಕೀಲು ತುಂಬಿಕೊಂಡಿದ್ದರೆ ಅದು ಹೃದ್ರೋಗದ ಲಕ್ಷಣವಂತೆ. ಒಂದುವೇಳೆ ಕಿವಿ ಮಂದವಾಗಿದ್ದರೆ ಅದು ಮಧುಮೇಹದ ಲಕ್ಷಣ ಎನ್ನುತ್ತಾರೆ.  ಮಧುಮೇಹಿಗಳಲ್ಲಿ ಕಿವಿ ಮಂದವಾಗಿರುವುದು ಸಾಮಾನ್ಯವೆಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಿವಿ ನೋವು ಕಂಡುಬಂದರೆ ಕೆಲವೊಮ್ಮೆ ಅದು ದವಡೆಯ ನೋವು ಆಗಿರುತ್ತದೆ. ದವಡೆಯ ಎಲುಬಿನ ನೋವಿನಿಂದ ಕಿವಿ ನೋವು ಬರುತ್ತದೆ.



ಕಿವಿಯೊಳಗೆ ಏನಾದರೂ ಸದ್ದಾಗುತ್ತಿದ್ದರೆ ಅದು ರಕ್ತದೊತ್ತಡ ಅಥವಾ ಬ್ರೈನ್ ಟ್ಯೂಮರ್ ನ ಲಕ್ಷಣವಾಗಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಕಿವಿಯನ್ನು ಶ್ರವಣವಾಹಕವಾಗಿ ಬಳಸುತ್ತಿದ್ದೇವೆ ಆದರೆ ಈಗ ಕಿವಿಯಲ್ಲಿ ನಡೆಯುವ ಯಾವುದೇ ಒಂದು  ಚಲನವಲನಗಳಿಗೂ ಆರೋಗ್ಯಕ್ಕೂ ಸಂಬಂಧವಿದೆ ಎನ್ನಲಾಗಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ