ಕನ್ನಡದ ಸ್ಟಾರ್ ನಟರು ದರ್ಶನ್ ಮನೆಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ…?

ಶನಿವಾರ, 27 ಜನವರಿ 2018 (06:20 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಕ್ರಾಂತಿ ಹಬ್ಬದಂದು ಲ್ಯಾಂಬೋರ್ಗಿನಿ ಕಾರೊಂದನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಈಗ ಆ ಕಾರನ್ನು ನೋಡಲು  ಕನ್ನಡದ ಸ್ಟಾರ್ ನಟರು ದರ್ಶನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.

 
ದರ್ಶನ್ ಅವರ ಆಪ್ತ ಸ್ನೇಹಿತರು, ಕಲಾವಿದರು ಹಾಗು ನಿರ್ಮಾಪಕರು ಅವರ ಮನೆಗೆ ಭೇಟಿ ನೀಡಿ ಕಾರಿನ  ಜೊತೆ ಫೋಟೋ ತೆಗೆದು ಸಂತಸ ಪಟ್ಟಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಪ್ರಜ್ವಲ್ ದೇವರಾಜ್ ಹಾಗು ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರು ದರ್ಶನ್ ಅವರ ಮನೆಗೆ ಬಂದು ಕಾರನ್ನು ಕಂಡು ಸಂತೋಷಗೊಂಡರು. ಹಾಗೆ ನಿರ್ದೇಶಕ, ನಟ ತರುಣ್ ಸುಧೀರ್ ಹಾಗು ಯುವ ನಟ ಯಶಸ್ ಸೂರ್ಯ ಕೂಡ ದರ್ಶನ್ ಅವರ ಮನೆಗೆ ಆಗಮಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ