ಹೆರಿಗೆ ನಂತರ ಮಹಿಳೆಯರು ತಿನ್ನಲೇಬೇಕಾದ ಆಹಾರಗಳು

ಬುಧವಾರ, 15 ಫೆಬ್ರವರಿ 2017 (11:07 IST)
ಬೆಂಗಳೂರು: ಗರ್ಭಿಣಿ ಮಹಿಳೆಯ ಆರೋಗ್ಯ ಕಾಪಾಡುವಷ್ಟೇ ಪ್ರಾಮುಖ್ಯ ಹೆರಿಗೆಯಾದ ಮೇಲೂ ಇರಬೇಕು. ಈ ಸಂದರ್ಭದಲ್ಲಿ ಯಾವುದೇ ಖಾಯಿಲೆಗಳು ಬಾರದಂತೆ ಸುರಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯ. ಹೆರಿಗೆಯ ನಂತರ ಸೇವಿಸುವ ಆಹಾರ ಹೇಗಿರಬೇಕು? ನೋಡೋಣ.

 
ಕುಚ್ಚಿಲು ಅಕ್ಕಿ ಅನ್ನ

ಕುಚ್ಚಿಲು ಅಕ್ಕಿ ಅನ್ನದಲ್ಲಿ ಅಮ್ಮಂದಿರಿಗೆ ಸಾಕಷ್ಟು ಕೆಲೋರಿ ಲಭಿಸುತ್ತದೆ ಮತ್ತು ಮಗುವಿಗೆ ಹಾಲುಣಿಸಲು ಸಾಕಷ್ಟು ಹಾಲು ಉತ್ಪಾದನೆಯಾಗಲು ಸಹಕಾರಿ. ಹಾಗಾಗಿ ಕೆಂಪಕ್ಕಿ ಸೇವನೆ ಉತ್ತಮ.

ಸಾಲ್ಮನ್ ಮೀನು

ಈ ಜಾತಿಯ ಮೀನುಗಳಲ್ಲಿ ಆರೋಗ್ಯಕರ ದೇಹಕ್ಕೆ ಬೇಕಾದ ಎಲ್ಲಾ ಅಂಶಗಳೂ ಇದರಲ್ಲಿವೆ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿರುವ ಕೊಬ್ಬು ಮಗುವಿನ ನರ ವ್ಯವಸ್ಥೆಗೆ ಉತ್ತಮ ಎನ್ನಲಾಗುತ್ತದೆ.

ಮೊಟ್ಟೆ
ಮೊಟ್ಟೆಯಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಹಾಲಿನಲ್ಲಿರುವ ಫ್ಯಾಟಿ ಆಸಿಡ್ ಹೆಚ್ಚಿಸಲು ಮೊಟ್ಟೆ ಸೇವಿಸುವುದು ಅಗತ್ಯವಾಗಿದೆ. ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಮ್ಮ ದೈನಂದಿನ ಪೋಷಕಾಂಶಗಳ ಅಗತ್ಯ ಪೂರೈಸುತ್ತದೆ.

ಹಸಿರು ತರಕಾರಿಗಳು
ಮಗುವಿನ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಎ ಹೇರಳವಾಗಿರುವ ಹಸಿರು ತರಕಾರಿಗಳನ್ನು ಸೇವಿಸಬೇಕು. ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಗಳ ಹೆಚ್ಚಳಕ್ಕೆ ಹಸಿರು ತರಕಾರಿಗಳ ಸೇವನೆ ಅತೀ ಅಗತ್ಯ.

ಬೇಳೆ ಕಾಳುಗಳು

ಇದರಲ್ಲಿ ನಾರಿನಂಶ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ, ಜೀರ್ಣ ಕ್ರಿಯೆಗೆ ಅತೀ ಅಗತ್ಯವಾದ ಅಂಶ.

ವೆಬ್ದುನಿಯಾವನ್ನು ಓದಿ