ಈ ನಾಲ್ಕು ವಿಟಮಿನ್ ಗಳಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು!

ಸೋಮವಾರ, 6 ಮಾರ್ಚ್ 2017 (12:35 IST)
ಬೆಂಗಳೂರು: ಕೂದಲು ಉದುರುವ ಸಮಸ್ಯೆಯೇ? ಏನೇನೋ ಔಷಧ ಸೇವಿಸಿ ಫಲವಾಗಿಲ್ಲವೇ? ಸಮಸ್ಯೆಯ ಮೂಲಕ್ಕೇ ಪರಿಹಾರ ನೀಡಿ. ಆಗ ಸಮಸ್ಯೆಯೂ ನಿವಾರಣೆಯಾಗುವುದು. ಕೂದಲು ಗಟ್ಟಿಯಾಗಬೇಕಾದರೆ ಯಾವೆಲ್ಲಾ ಪೋಷಕಾಂಶಗಳಿರುವ ಆಹಾರ ಸೇವಿಸಬೇಕು ನೋಡಿಕೊಳ್ಳಿ.


ವಿಟಮಿನ್ ಎ

ವಿಟಮಿನ್ ಎ ಅಂಗಾಂಶಗಳ ಬೆಳವಣಿಗೆಗೆ ಪೂರಕ. ಇದು ಒಣ ಮತ್ತು ಸೀಳು ಕೂದಲು ಆಗದಂತೆ ತಡೆಯುತ್ತದೆ. ಬಸಳೆ, ಪಾಲಕ್ ಸೊಪ್ಪು, ಕ್ಯಾರೆಟ್ ನಂತಹ ಆಹಾರ ಸೇವಿಸುವುದರಿಂದ ಸಾಕಷ್ಟು ವಿಟಮಿನ್ ಎ ಅಂಶ ದೊರಕುತ್ತದೆ.

ವಿಟಮಿನ್ ಇ

ಆರೋಗ್ಯಕರ ಕೂದಲುಗಳ ಬೆಳವಣಿಗೆಗೆ ಬೇಕಾದ ಅಂಗಾಂಗಳ ಬೆಳವಣಿಗೆಗೆ ವಿಟಮಿನ್ ಇ ಅಗತ್ಯ. ಇದು ಕೂದಲುಗಳ ಬೇರುಗಳಲ್ಲಿ ಸುಗಮವಾಗಿ ರಕ್ತ ಸಂಚಾರವಾಗುವಂತೆ ಮಾಡುತ್ತದೆ ಮತ್ತು ಕೂದಲುಗಳನ್ನು ಸದೃಢಗೊಳಿಸುತ್ತದೆ. ಈ ಪೋಷಕಾಂಶಕ್ಕಾಗಿ ಆದಷ್ಟು ಬಾದಾಮಿ, ಬೇಳೆ ಕಾಳುಗಳನ್ನು ಸೇವಿಸಿ.

ವಿಟಮಿನ್ ಸಿ

ವಿಟಮಿನ್ ಸಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. ಇದು ಕೂದಲುಗಳ ಬೆಳವಣಿಗೆಗೂ ಸಹಾಯಕ. ಕೂದಲು ಮಾತ್ರವಲ್ಲ, ಚರ್ಮ ಮತ್ತು ಸುಂದರವಾದ ಉಗುರು ಹೊಂದಿರಬೇಕೆಂದರೂ ವಿಟಮಿನ್ ಸಿ ಅಂಶವಿರುವ ಆಹಾರ ಸೇವಿಸಿ. ಕಿತ್ತಳೆ ಹಣ್ಣು,  ಸ್ಟ್ರಾಬೆರಿ, ಕಿವಿ ಹಣ್ಣು, ದ್ರಾಕ್ಷಿ ಹಣ್ಣು ಸೇವಿಸಿ.

ವಿಟಮಿನ್ ಡಿ

ಚಿಕ್ಕಮಕ್ಕಳನ್ನು ಎಳೆಬಿಸಿಲಿಗೆ ಒಡ್ಡುವುದನ್ನು ನೋಡಿದ್ದೇವೆ. ಇದರ ಕಾರಣ ವಿಟಮಿನ್ ಡಿ ಅಂಶ ನಮ್ಮ ದೇಹಕ್ಕೆ ಒದಗಬೇಕು ಎಂಬುದು. ರೇಷಿಮೆಯಂತಹ ಕೂದಲುಗಳು ಬೇಕೆಂದರೆ ಬೆಳಗ್ಗಿನ ಎಳೆ ಬಿಸಿಲಿಗೆ ಸ್ವಲ್ಪ ಹೊತ್ತು ತಲೆ ಒಡ್ಡಿದರೂ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ