ಮಕ್ಕಳ ಎನರ್ಜಿ ಹೆಚ್ಚಿಸಲು ಈ ಪಾನೀಯ ಕುಡಿಸಿ

ಭಾನುವಾರ, 3 ಫೆಬ್ರವರಿ 2019 (07:29 IST)
ಬೆಂಗಳೂರು : ಬೆಳೆಯುತ್ತಿರುವ ಮಕ್ಕಳಿಗೆ ಕೆಮಿಕಲ್ ಯುಕ್ತ ಪಾನೀಯಗಳನ್ನು ಕುಡಿಸಿ ಆರೋಗ್ಯ ಹಾಳುಮಾಡುವ ಬದಲು ಅವರಿಗೆ ಮನೆಯಲ್ಲೇ ಆರೋಗ್ಯಕರ ಪಾನೀಯ ರಸಾಲವನ್ನು ತಯಾರಿಸಿ ಕೊಡಿ. ಇದರಿಂದ ಅವರ ಆರೋಗ್ಯವು ಉತ್ತಮವಾಗಿರುತ್ತದೆ.


ಈ ಪಾನೀಯವನ್ನು ತಯಾರಿಸುವ ವಿಧಾನ ಹೀಗಿದೆ:


ಒಣಶುಂಠಿ ಹಾಗೂ ಮೆಣಸಿನ ಕಾಳನ್ನು ತೆಗೆದುಕೊಂಡು ಬೇರೆ ಬೇರೆಯಾಗಿ ತುಪ್ಪ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಗಟ್ಟಿ ಮೊಸರು 1 ಕಪ್ ತೆಗೆದುಕೊಂಡು ಅದಕ್ಕೆ ನೀರು ಹಾಕದೆ ಮಜ್ಜಿಗೆ ಮಾಡಿ ಅದಕ್ಕೆ ಒಣಶುಂಠಿ ಪುಡಿ1 ಚಿಟಿಕೆ ಹಾಗೂ ಮೆಣಸಿನಕಾಳಿನ ಪುಡಿ 1 ಚಿಟಿಕೆ ಹಾಕಿ ಅದಕ್ಕೆ ಸ್ವಲ್ಪ ಕಲ್ಲುಪ್ಪಹಾಗೂ ಸಕ್ಕರೆ ಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಊಟ ಆದ ಮೇಲೆ 2 ಬಾರಿ ಮಕ್ಕಳಿಗೆ ಕುಡಿಸಿ. ಇದರಿಂದ ಮಕ್ಕಳ ಆರೋಗ್ಯವು ಉತ್ತಮವಾಗಿರುವುದರ ಜೊತೆಗೆ  ಅವರಿಗೆ ಎನರ್ಜಿ ಕೂಡ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ