ಬೆಂಗಳೂರು : ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಇದು ಮಿತಿಮೀರಿದರೆ ಪ್ರಾಣವೇ ಹೋಗಬಹುದು. ಇತ್ತೀಚಿಗಿನ ಸಂಶೋಧನೆಯೊಂದರಲ್ಲಿ ಈ ಒಂದು ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟಬಲ್ಲ ಅಂಶ ಜಾಸ್ತಿ ಇದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಆ ಹಣ್ಣು ಕ್ಯಾನ್ಸರ್ ಸೆಲ್ ಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆಯಂತೆ. ಆ ಹಣ್ಣು ಯಾವುದು ಎಂಬುದನ್ನು ತಿಳಿಯೋಣ.
ಆ ಹಣ್ಣು ನೆರಳೆಹಣ್ಣು. ಈ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಬರುದಿಲ್ಲವಂತೆ. ಯಾಕೆಂದರೆ ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಐರನ್, ಮಿಟಮಿನ್ ಸಿ ತುಂಬಾ ಜಾಸ್ತಿ ಇದೆ. ಇದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇದರಲ್ಲಿ ಆ್ಯಂಟಿ ಆಸಿಡೆಂಟ್ ಅಂಶವಿದೆ. ಇದರಿಂದ ಹೃದಯ ಸಂಬಂಧಿ ರೋಗ ಬರಲ್ಲ, ರಕ್ತದೊತ್ತಡ ಬರಲ್ಲ, ಇದು ಮಧುಮೇಹ ರೋಗಕ್ಕೆ ರಾಮಬಾಣ. ಇದರ ಎಲೆ ತಿನ್ನವುದರಿಂದಲೂ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಈ ಹಣ್ಣನ್ನು ತಿಂದರೆ 75%ನಷ್ಟು ರೋಗ ನಿಯಂತ್ರಣಕ್ಕೆ ಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.