ಬಂಜೆತನಕ್ಕೆ ಇದು ಕೂಡ ಒಂದು ಕಾರಣವಂತೆ!

ಗುರುವಾರ, 8 ಫೆಬ್ರವರಿ 2018 (07:34 IST)
ಬೆಂಗಳೂರು : ಇತ್ತೀಚಿನ ಸಿಕ್ಕಾಪಟ್ಟೆ ಬ್ಯುಸಿ ಲೈಫ್ ನಲ್ಲಿ ಅಡುಗೆ ಮಾಡೋದಕ್ಕೆ ಪುರುಸೊತ್ತು  ಇಲ್ಲದಿರಬೇಕಾದ್ರೆ ತರಕಾರಿ ಮತ್ತು ಹಣ್ಣುಗಳನ್ನ ಮೂರು ಮೂರು ಸಲ ತೊಳೀಲಿಕ್ಕೆ ಟೈಮ್ ಎಲ್ಲಿ ಅಂತ ಸರಿಯಾಗಿ ವಾಶ್ ಮಾಡ್ದೆ ಅದನ್ನ ಸೇವಿಸೋವ್ರು ಜಾಗ್ರತೆಯಾಗಿರಿ. ಯಾಕಂದ್ರೆ ಈ ರೀತಿ ಮಾಡೋದ್ರಿಂದ ಬಂಜೆತನ ನಿಮ್ಮನ್ನ ಕಾಡಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

 
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯ ಪ್ರಕಾರ ಸರಿಯಾಗಿ ತೊಳೆಯದ  ತರಕಾರಿ ಹಣ್ಣುಗಳನ್ನು ಸೇವಿಸಿದ್ದಲ್ಲಿ ಅದರಲ್ಲಿ  ಇರುವ ಪೆಸ್ಟಿಸೈಡ್ ಗಳು ದೇಹದಲ್ಲಿ ಹಾರ್ಮೋನ್ ಗಳ ಏರಿಳಿತವನ್ನು ಉಂಟುಮಾಡುತ್ತವೆ. ಇದರಿಂದ ಸಂತಾನೋತ್ಪತ್ತಿ ಕಡಿಮೆಯಾಗಿ ಮಕ್ಕಳಾಗುವ  ಸಾಧ್ಯತೆಗಳು ಕ್ಷೀಣಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಪುರುಷರಲ್ಲಿ ಪೆಸ್ಟಿಸೈಡ್ ಯುಕ್ತ ಆಹಾರ ಸೇವಿಸುವವರಲ್ಲಿ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಂಡಿರುವುದು ಬೆಳಕಿಗೆ ಬಂದಿತು. ಆದರಿಂದ ಪೆಸ್ಟಿಸೈಡ್ ಯುಕ್ತ ಆಹಾರ ಪದಾರ್ಥಗಳು ಡೈರೆಕ್ಟ್ ಆಗಿ ಹಾನಿಯನ್ನು ಉಂಟುಮಾಡದಿದ್ದರೂ ದೇಹಕ್ಕೆ ಅದರಲ್ಲೂ ಗರ್ಭಧಾರಣೆಗೆ ಹಾನಿಯನ್ನುಂಟುಮಾಡುತ್ತದೆ ಎಂಬುದು ಈ  ಸಂಶೋಧನೆಯಿಂದ ದೃಢಪಟ್ಟಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ